ನವದೆಹಲಿ: ಕತಾರ್ನ ದೋಹಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿಯನ್ನು ಬಳಸಲು ಸಾಧ್ಯವಾಗಿದ್ದಕ್ಕೆ ಖ್ಯಾತ ಗಾಯಕ ಮಿಕಾ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ನಮ್ಮ ಹಣವನ್ನು ಡಾಲರ್ನಂತೆ ಬಳಸಲು ನಮಗೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಲ್ಯೂಟ್ ಎಂದಿದ್ದಾರೆ.
“ಶುಭೋದಯ. ದೋಹಾ ವಿಮಾನನಿಲ್ದಾಣದ ಲೋಯಿಸ್ ವ್ಯುಟನ್ ಸ್ಟೋರ್ನಲ್ಲಿ ಶಾಪಿಂಗ್ ಮಾಡುವಾಗ ಭಾರತೀಯ ರೂಪಾಯಿಗಳನ್ನು ಬಳಸಲು ನನಗೆ ತುಂಬಾ ಹೆಮ್ಮೆ ಅನಿಸಿತು. ನೀವು ಯಾವುದೇ ರೆಸ್ಟೋರೆಂಟ್ನಲ್ಲಿಯೂ ರೂಪಾಯಿಗಳನ್ನು ಬಳಸಬಹುದು. ಇದು ಅದ್ಭುತವಲ್ಲವೇ? ನಮ್ಮ ಹಣವನ್ನು ಡಾಲರ್ನಂತೆ ಬಳಸಲು ನಮಗೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ನರೇಂದ್ರ ಮೋದಿ ಅವರಿಗೆ ಒಂದು ಬೃಹತ್ ನಮಸ್ಕಾರ” ಎಂದು ಮಿಕಾ ಸಿಂಗ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಅವರ ಟ್ವಿಟ್ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಕರೆನ್ಸಿ ಬಲಗೊಳ್ಳುತ್ತಿದೆ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.
Good morning.
I felt so proud to be able to use Indian rupees whilst shopping at #Dohaairport in the @LouisVuitton store. You can even use rupees in any restaurant.. Isn’t that wonderful? A massive salute to @narendramodi saab for enabling us to use our money like dollars. pic.twitter.com/huhKR2TjU6— King Mika Singh (@MikaSingh) April 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.