ನವದೆಹಲಿ: ಮಧ್ಯಪ್ರದೇಶದ ಇಂದೋರ್ನ ಪ್ರತಿಭಾನ್ವಿತ ವಿದ್ಯಾರ್ಥಿನಿ ತನಿಷ್ಕಾ ಸುಜಿತ್ ತನ್ನ 15ನೇ ವಯಸ್ಸಿನಲ್ಲಿ ಬಿಎ ಅಂತಿಮ ವರ್ಷದ ಪರೀಕ್ಷೆಗಳನ್ನು ಬರೆಯಲು ಸಿದ್ಧಳಾಗಿದ್ದಾಳೆ. ಭವಿಷ್ಯದಲ್ಲಿ ದೇಶದ ಮುಖ್ಯ ನ್ಯಾಯಾಧೀಶೆಯಾಗುವ ಕನಸು ಹೊಂದಿರುವ ಆಕೆ ಕಾನೂನು ಅಧ್ಯಯನವನ್ನು ಕೈಗೊಳ್ಳಲು ಸಜ್ಜಾಗುತ್ತಿದ್ದಾಳೆ.
2020ರಲ್ಲಿ ಕೋವಿಡ್ ಕಾರಣದಿಂದಾಗಿ ತಂದೆ ಮತ್ತು ತಾತನನ್ನು ಕಳೆದುಕೊಂಡಿರುವ ಈಕೆ, ಕೆಲ ದಿನಗಳ ಹಿಂದೆ ಭೋಪಾಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಸುಂದರ ಕ್ಷಣಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾಳೆ.
“ಪ್ರಧಾನಿಯನ್ನು ಭೇಟಿಯಾಗಿದ್ದು ನನ್ನ ಸೌಭಾಗ್ಯ. ವಿನಂಬ್ರ, ಡೌನ್ ಟು ಅರ್ತ್, ಹಾಸ್ಯ ಪ್ರಜ್ಞೆಯ ಮತ್ತು ಆತ್ಮವಿಶ್ವಾಸದ ವ್ಯಕ್ತಿಯಾದ ನಿಮ್ಮೊಂದಿಗೆ ಸಮಯ ಕಳೆದಿರುವುದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನನ್ನನ್ನು ಭೇಟಿಯಾಗಿರುವುದಕ್ಕೆ ಧನ್ಯವಾದಗಳು. ನಿಮ್ಮಿಂದ ತುಂಬಾ ಕಲಿತಿದ್ದೇನೆ, ನಿಮ್ಮ ಸ್ಫೂರ್ತಿಗೆ ಧನ್ಯವಾದಗಳು” ಎಂದು ತನಿಷ್ಕಾ ಟ್ವಟ್ ಮಾಡಿ ಫೋಟೋ ಹಂಚಿಕೊಂಡಿದ್ದಾಳೆ.
What a pleasure meeting hon’ Prime minister Shri @narendramodi sir. Extremely grateful for all the time I spent with a humble ,down to earth , fun and confident person. Thanks for having me over. Learnt so much from you , you are such an inspiration ,Thanks to @iShankarLalwani pic.twitter.com/4HO29tnQ87
— Tanishkaasujit (@tanishkaasujit) April 10, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.