ನವದೆಹಲಿ: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ಕ್ಕೆ ಪಥ ಸಂಚಲನ ನಡೆಸಲು ಅವಕಾಶ ನೀಡದಂತೆ ಕೋರಿದ್ದ ತಮಿಳುನಾಡು ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ಪಥ ಸಂಚಲನಕ್ಕೆ ಮದ್ರಾಸ್ ಹೈಕೋರ್ಟ್ ಹಸಿರು ನಿಶಾನೆ ತೋರಿದ್ದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂಕೋರ್ಟ್ನಲ್ಲೂ ಆರ್ಎಸ್ಎಸ್ ಪರ ತೀರ್ಪು ಬಂದಿದೆ.
ಅಕ್ಟೋಬರ್ 2022 ರಲ್ಲಿ, ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಗಾಂಧಿ ಜಯಂತಿಯ ಸ್ಮರಣಾರ್ಥ ರಾಜ್ಯದಲ್ಲಿ ಸರಣಿ ಪಥ ಸಂಚಲಗಳನ್ನು ನಡೆಸಲು ಆರ್ಎಸ್ಎಸ್ ತಮಿಳುನಾಡು ಸರ್ಕಾರದ ಅನುಮತಿಯನ್ನು ಕೋರಿತ್ತು. ಆದರೆ ಸರ್ಕಾರ ನಿರಾಕರಿಸಿದ ಕಾರಣ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಪಥ ಸಂಚಲನಕ್ಕೆ ಅನುವು ನೀಡುವಂತೆ ಕೋರಲಾಗಿತ್ತು. ಅದರಂತೆ ನವೆಂಬರ್ 2022 ರಲ್ಲಿ, ಏಕಸದಸ್ಯ ಪೀಠವು ಪಥ ಸಂಚಲನಕ್ಕೆ ಅನುಮತಿ ನೀಡಿತು, ಅದು ಆರ್ಎಸ್ಎಸ್ ಮೆರವಣಿಗೆಯನ್ನು ಆಡಿಟೋರಿಯಂ ಅಥವಾ ಮೈದಾನದಲ್ಲಿ ನಡೆಸಬೇಕು ಎಂದು ಕಡ್ಡಾಯಗೊಳಿಸಲಾಗಿತ್ತು. ಈ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿ ಪ್ರಶ್ನಿಸಲಾಗಿತ್ತು. ಫೆಬ್ರವರಿ 10 ರಂದು ವಿಭಾಗೀಯ ಪೀಠವು ನಿರ್ಬಂಧವನ್ನು ತೆಗೆದುಹಾಕಿ ಪಥ ಸಂಚಲನಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಸರ್ಕಾರವು ವಿಭಾಗೀಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತು. ನಂತರ ಸುಪ್ರೀಂ ಪ್ರಕರಣವನ್ನು ಆಲಿಸಿ ಇಂದು ತೀರ್ಪು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.