ಪುಣೆ: ವಿಶ್ವದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆಗೆ ಭಾರತ ಮತ್ತು ಆಫ್ರಿಕಾ ಬದ್ಧವಾಗಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಪ್ರತಿಪಾದಿಸಿದ್ದಾರೆ.
ಅವರು ಇಂದು ಪುಣೆಯಲ್ಲಿ ಭಾರತ-ಆಫ್ರಿಕಾ ಜಂಟಿ ವ್ಯಾಯಾಮ AFINDEX-2023 ರ ಸಮಾರೋಪದಲ್ಲಿ ಮಾತನಾಡುತ್ತಿದ್ದರು.
AFINDEX-2023 ತರಬೇತಿ ವ್ಯಾಯಾಮವು ಇಥಿಯೋಪಿಯಾ, ಘಾನಾ, ಕೀನ್ಯಾ, ಲೆಸೋಥೋ, ನೈಜರ್, ಸೀಶೆಲ್ಸ್, ತಾಂಜಾನಿಯಾ, ಉಗಾಂಡಾ, ಜಾಂಬಿಯಾ, ಬೋಟ್ಸ್ವಾನಾ, ಕ್ಯಾಮರೂನ್, ಕಾಂಗೋ, ಈಜಿಪ್ಟ್, ಇಸ್ವಾಟಿನಿ, ಮಲಾವಿ, ನೈಜೀರಿಯಾ, ಮೊರಾಕೊ, ರುವಾಂಡಾ, ಸೆನೆಗಲ್, ಜಿಂಬಾಬ್ವೆ ದೇಶಗಳ ಪಡೆಗಳು ಮತ್ತು ಪ್ರತಿನಿಧಿಗಳನ್ನು ಒಳಗೊಂಡಿತ್ತು.
2008 ರ ಭಾರತ-ಆಫ್ರಿಕಾ ಶೃಂಗಸಭೆಯ ನಂತರ ಆಫ್ರಿಕಾದೊಂದಿಗೆ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯನ್ನು ಕಾಯ್ದುಕೊಳ್ಳುವ ಭಾರತದ ಪ್ರಯತ್ನಗಳ ಭಾಗವಾಗಿದೆ ಈ ಜಂಟಿ ವ್ಯಾಯಾಮ ನಡೆದಿದೆ. 2019 ರ ನಂತರ, ಇದನ್ನು ಈ ವರ್ಷ ಆಯೋಜಿಸಲಾಗಿದೆ. ಯುದ್ಧತಂತ್ರದ ಡ್ರಿಲ್ಗಳು ಮತ್ತು ಜಂಟಿಯಾಗಿ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವು ಈ ಜಂಟಿ ವ್ಯಾಯಾಮದ ಕೇಂದ್ರಬಿಂದುವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.