News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದಲ್ಲಿ ಒಟ್ಟು 4,748 ರೈತ ಉತ್ಪಾದಕ ಸಂಸ್ಥೆಗಳು ನೋಂದಣಿಯಾಗಿವೆ: ಕೇಂದ್ರ

ನವದೆಹಲಿ: ದೇಶಾದ್ಯಂತ ಒಟ್ಟು 4,748 ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ನೋಂದಣಿಯಾಗಿವೆ ಎಂದು ಕೇಂದ್ರ ಸರ್ಕಾರ ಇಂದು ಮಾಹಿತಿ ನೀಡಿದೆ.

ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, 10,000 ಎಫ್‌ಪಿಒಗಳನ್ನು ವಿವಿಧ ಜಾರಿ ಸಂಸ್ಥೆಗಳಿಗೆ ಹಂಚಲಾಗಿದೆ, ಇದು 2020 ರಲ್ಲಿ ಪ್ರಾರಂಭಿಸಲಾದ ಯೋಜನೆಯೊಂದಿಗೆ ಸಿಂಕ್ ಆಗಿದೆ ಎಂದಿದ್ದಾರೆ.

ಸರ್ಕಾರವು ಕ್ರೆಡಿಟ್ ಗ್ಯಾರಂಟಿ ಸೌಲಭ್ಯ ಮತ್ತು ರೈತ ಉತ್ಪಾದಕ ಸಂಸ್ಥೆಗಳ ರೈತರಿಗೆ ಇಕ್ವಿಟಿ ಅನುದಾನದೊಂದಿಗೆ 3 ಮೂರು ವರ್ಷಗಳ ಅವಧಿಗೆ  ಪ್ರತಿ ಎಫ್‌ಪಿಒಗೆ 18 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ನೀಡುತ್ತಿದೆ  ಎಂದು ಅವರು ಮಾಹಿತಿ ನೀಡಿದ್ದಾರೆ.

ರೈತ ಉತ್ಪಾದಕ ಸಂಸ್ಥೆಗಳು ಅಂದರೆ ಪ್ರಾಥಮಿಕ ಉತ್ಪಾದಕರು ರಚಿಸಿದ ಕಾನೂನು ಘಟಕ ಅಥವಾ ಸಂಸ್ಥೆಯಾಗಿರುತ್ತದೆ. ರೈತ ಉತ್ಪಾದಕ ಸಂಸ್ಥೆಯನ್ನು ರೈತರು, ಹಾಲು ಉತ್ಪಾದಕರು, ಮೀನುಗಾರರು, ನೇಕಾರರು, ಗ್ರಾಮೀಣ ಕುಶಲಕರ್ಮಿಗಳು ರಚಿಸಬಹುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top