News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗರಿಷ್ಠ ಬೇಡಿಕೆ ವೇಳೆ ಹೆಚ್ಚು ವಿದ್ಯುತ್ ಲಭ್ಯತೆ ಖಚಿತಪಡಿಸಿಕೊಳ್ಳಲು PUShP ಪೋರ್ಟಲ್‌ ಆರಂಭ

ನವದೆಹಲಿ: ಗರಿಷ್ಠ ಬೇಡಿಕೆಯ ಸಮಯದಲ್ಲಿ ಹೆಚ್ಚಿನ ವಿದ್ಯುತ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು High Price Day Ahead Market and Surplus Power Portal (PUShP) ಅನ್ನು ಪ್ರಾರಂಭಿಸಿದೆ.

ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಗುರುವಾರ ನವದೆಹಲಿಯಲ್ಲಿ ನಡೆದ ವರ್ಚುವಲ್ ಸಮಾರಂಭದಲ್ಲಿ ರಾಜ್ಯ ಸರ್ಕಾರಗಳು ಮತ್ತು ವಿದ್ಯುತ್ ವಲಯದ 200 ಕ್ಕೂ ಹೆಚ್ಚು ಮಂದಿಯ ಉಪಸ್ಥಿತಿಯಲ್ಲಿ ಪೋರ್ಟಲ್ ಅನ್ನು ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್, ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡಲು ಲಭ್ಯವಿರುವ ಎಲ್ಲಾ ವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಪೋರ್ಟಲ್‌ನ ಒಟ್ಟಾರೆ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಿದರು.

ಕಳೆದ ವರ್ಷಕ್ಕಿಂತ ಈ ವರ್ಷ ವಿದ್ಯುತ್ ಬೇಡಿಕೆ ಹೆಚ್ಚಲಿದೆ ಎಂದು ವಿದ್ಯುತ್ ಸಚಿವಾಲಯ ನಿರೀಕ್ಷಿಸಿದೆ. ಆದ್ದರಿಂದ, ವಿದ್ಯುತ್ ಉತ್ಪಾದನೆಯ ವೆಚ್ಚವೂ ಹೆಚ್ಚಾಗುವ ನಿರೀಕ್ಷೆ ಇದೆ.

HP-DAM ಅತಿಯಾದ ದರಗಳನ್ನು ವಿಧಿಸಲು ಯಾರಿಗೂ ಅನುಮತಿಸುವುದಿಲ್ಲ. ಪ್ರತಿ ಯೂನಿಟ್‌ಗೆ ರೂ 12 ಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನಾ ವೆಚ್ಚದೊಂದಿಗೆ  ಉತ್ಪಾದಿಸುವ ಸಾಮರ್ಥ್ಯದವರಿಗೆ ಮಾತ್ರ HP-DAM ನಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

ಉತ್ಪಾದನಾ ವೆಚ್ಚವು ರೂ 12 ಕ್ಕಿಂತ ಕಡಿಮೆಯಿದ್ದರೆ, ಜನರೇಟರ್‌ಗಳು ಪವರ್ ಎಕ್ಸ್‌ಚೇಂಜ್‌ನ ಇಂಟಿಗ್ರೇಟೆಡ್ ಡೇ ಅಹೆಡ್ ಮಾರ್ಕೆಟ್‌ನಲ್ಲಿ ((I-DAM) ರೂ 12 ರ ಸೀಲಿಂಗ್ ಬೆಲೆಯೊಂದಿಗೆ ಮಾತ್ರ ವಿದ್ಯುತ್ ನೀಡಬೇಕಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top