News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಸ್ವಾತಂತ್ರ್ಯ ಹೇಗೆ ಕಾಣುತ್ತದೆʼ-ಗಮನ ಸೆಳೆದ IFS ಅಧಿಕಾರಿ ಹಂಚಿಕೊಂಡ ವಿಡಿಯೋ

ನವದೆಹಲಿ: ಸ್ವಇಚ್ಛೆಯಿಂದ ಅಂದುಕೊಂಡಂತೆ ಮಾಡಲು ಭೂಮಿಯು ಕೇವಲ ಮನುಷ್ಯನಿಗೆ ಸೇರಿದ್ದಲ್ಲ, ಈ ಭೂಮಿ ಲಕ್ಷಾಂತರ ಜಾತಿಯ ಇತರ ಪ್ರಾಣಿಗಳಿಗೂ ಸೇರಿದ್ದಾಗಿದೆ.  ದೊಡ್ಡದು ಅಥವಾ ಚಿಕ್ಕದು ಸೇರಿದಂತೆ ಪ್ರತಿಯೊಂದು ಜೀವಿಯೂ ಪ್ರಕೃತಿಯಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಜನ್ಮದತ್ತವಾಗಿಯೇ ಪಡೆದುಕೊಂಡಿರುತ್ತವೆ. ಆದರೆ ಬುದ್ಧಜೀವಿ ಅನಿಸಿಕೊಂಡ ಮನುಷ್ಯ ಸಾವಿರಾರು ಕಾಡು ಪಕ್ಷಿಗಳು ಮತ್ತು ಪ್ರಾಣಿಗಳನ್ನು ಸೆರೆಯಲ್ಲಿಟ್ಟುಕೊಂಡು ಹೀನಾಯವಾಗಿ ನಡೆಸಿಕೊಳ್ಳುವುದನ್ನು ನಾವು ಕಂಡಿದ್ದೇವೆ.  ಅದೃಷ್ಟವಶಾತ್, ಇಂತಹ ಸೆರೆಯಲ್ಲಿರುವ ಜೀವಿಗಳ ರಕ್ಷಣೆಗೆ ಬರುವ ಒಳ್ಳೆಯ ನಾಗರಿಕರೂ ನಮ್ಮ ಸಮಾಜದಲ್ಲಿ ಇದ್ದಾರೆ.

ವನ್ಯಜೀವಿಗಳ ಬಗ್ಗೆ ನಿರಂತರವಾಗಿ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳುವ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಇತ್ತೀಚಿಗೆ ಇಂತಹ ಒಂದು ಹೃದಯಸ್ಪರ್ಶಿ ವೀಡಿಯೊವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. ಈ ಅದ್ಭುತವಾದ ವಿಡಿಯೋ ಸ್ವಾತಂತ್ರ್ಯದ ಸಂತೋಷವನ್ನು ಸೆರೆಹಿಡಿದಿದೆ. ಸೆರೆಯಲ್ಲಿದ್ದ ಪ್ರಾಣಿಗಳು ಮತ್ತು ಪಕ್ಷಿಗಳನ್ನು ರಕ್ಷಕರು ಕಾಡಿಗೆ ಬಿಡುವುದನ್ನು ಇದರಲ್ಲಿ ತೋರಿಸಲಾಗಿದೆ.

“ಸ್ವಾತಂತ್ರ್ಯವು ಹೇಗೆ ಕಾಣುತ್ತದೆ” ಎಂದು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟರ್‌ನಲ್ಲಿ ಒಕ್ಕಣೆ ಬರೆದು ಈ ವಿಟಿಯೋ ಹಂಚಿಕೊಂಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top