ನವದೆಹಲಿ: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಸ್ಕ್ಯಾನ್ ಮತ್ತು ಶೇರ್ ಸೇವೆಯ ಮೂಲಕ 365 ಆಸ್ಪತ್ರೆಗಳಲ್ಲಿ ತ್ವರಿತ OPD ನೋಂದಣಿಯನ್ನು ಸುಗಮಗೊಳಿಸಲಾತ್ತಿದ್ದು, ಇದರ ಮೂಲಕ 5 ಲಕ್ಷಕ್ಕೂ ಹೆಚ್ಚು ರೋಗಿಗಳು ಕ್ಯೂ ರಹಿತ OPD ನೋಂದಣಿಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ನ್ಯಾಷನಲ್ ಹೆಲ್ತ್ ಅಥಾರಿಟಿ (NHA) ತನ್ನ ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ 2022 ರ ಅಕ್ಟೋಬರ್ನಲ್ಲಿ ವೇಗವಾಗಿ OPD ನೋಂದಣಿಗಾಗಿ ಸ್ಕ್ಯಾನ್ ಮತ್ತು ಶೇರ್ ಸೇವೆಯನ್ನು ಪರಿಚಯಿಸಿತು. ಪ್ರಾರಂಭವಾದ ಐದು ತಿಂಗಳೊಳಗೆ, ಸೇವೆಯನ್ನು 365 ಆಸ್ಪತ್ರೆಗಳು ಅಳವಡಿಸಿಕೊಂಡಿವೆ. QR-ಕೋಡ್ ಆಧಾರಿತ ತ್ವರಿತ ನೋಂದಣಿ ಸೇವೆಯು ಭಾಗವಹಿಸುವ ಆಸ್ಪತ್ರೆಗಳ (ಹೊರ ರೋಗಿಗಳ ವಿಭಾಗ) OPD ನೋಂದಣಿ ಪ್ರದೇಶಗಳಲ್ಲಿ ಕಾಯುವ ಸಮಯವನ್ನು ತೀವ್ರವಾಗಿ ಕಡಿಮೆ ಮಾಡುವ ಮೂಲಕ 5 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸಮಯವನ್ನು ಉಳಿಸಲು ಸಹಾಯ ಮಾಡಿದೆ.
ಕೇಂದ್ರ ಆರೋಗ್ಯ ಸಚಿವರು ತಮ್ಮ ಟ್ವೀಟ್ನಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ತ್ವರಿತ ಮತ್ತು ಕ್ಯೂ ಕಡಿಮೆ ಒಪಿಡಿ ನೋಂದಣಿಯನ್ನು ಶ್ಲಾಘಿಸಿದ್ದಾರೆ:
Quick & Queue Less OPD Registration!
Under Ayushman Bharat Digital Mission, more than 5 lakh patients availed benefit of faster OPD registrations using the Scan & Share service.
Within five months of its launch, the service has been adopted by 365 hospitals across the country. pic.twitter.com/NI9FLlQF8Q
— Dr Mansukh Mandaviya (@mansukhmandviya) February 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.