ನವದೆಹಲಿ: ಮೊದಲ ಹಂತದ ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ ಅನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈ ಹೊಸ ಎಕ್ಸ್ಪ್ರೆಸ್ವೇ ಭಾರತದ ಅತಿ ಉದ್ದದ ಎಕ್ಸ್ಪ್ರೆಸ್ವೇ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮಾತ್ರವಲ್ಲದೇ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ದೇಶದ ಬಹಳಷ್ಟು ಜನರು ಈ ಎಕ್ಸ್ಪ್ರೆಸ್ ವೇ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ ಆದರೆ, ಈ ಬಾರಿ ಭಾರತದಲ್ಲಿನ ಸಿಂಗಾಪುರದ ಹೈಕಮಿಷನರ್ ಸೈಮನ್ ವಾಂಗ್ ಅವರಿಂದ ಎಕ್ಸ್ಪ್ರೆಸ್ ವೇ ಪ್ರಶಂಸೆಗಳನ್ನು ಪಡೆದುಕೊಂಡಿದೆ.
ಹೊಸದಾಗಿ ಉದ್ಘಾಟನೆಗೊಂಡ ಮಾರ್ಗವನ್ನು ಶ್ಲಾಘಿಸಿರುವ ವಾಂಗ್ ಅವರು, ಈ ಮಾರ್ಗದಲ್ಲಿ ನಿಂತು ಫೋಟೋ ಮತ್ತು ವೀಡಿಯೊಗಳನ್ನು ತೆಗೆದು ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ಇಂದು ಹೊಸ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಪ್ರಯತ್ನಿಸಿದೆ. ಇದರ ಬಗ್ಗೆ ಹೇಳಲು ಇರುವುದು ಕೇವಲ ಒಂದೇ ಪದ “ವಾವ್!”. ಅದ್ಭುತ ಭಾರತ” ಎಂದು ಒಕ್ಕಣೆ ಬರೆದಿದ್ದಾರೆ.
ಜೊತೆಗೆ, ಮಾರ್ಗದಲ್ಲಿ ಪ್ರಯಾಣಿಸುವಾಗ ತಮ್ಮ ಕಾರಿನಿಂದ ರೆಕಾರ್ಡ್ ಮಾಡಿದ ವೀಡಿಯೊ, ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಹೈಕಮಿಷನರ್ ಪೋಸ್ಟ್ ಮಾಡಿದ ಚಿತ್ರಗಳಲ್ಲಿ ಒಂದರಲ್ಲಿ ಅವರು ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ತಮಾಷೆಯಾಗಿ ಪೋಸ್ ನೀಡುತ್ತಿರುವುದನ್ನು ನೋಡಬಹುದು.
1,386 ಕಿಲೋಮೀಟರ್ಗಳಷ್ಟು ಉದ್ದವಿರುವ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಭಾರತದ ಅತಿ ಉದ್ದದ ಮೋಟಾರು ಮಾರ್ಗವಾಗಿದೆ. ಇದು ಭಾರತದ ಆರ್ಥಿಕ ಕೇಂದ್ರವಾದ ಮುಂಬೈ ಮತ್ತು ರಾಷ್ಟ್ರದ ರಾಜಧಾನಿ ದೆಹಲಿ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ. ಇದಲ್ಲದೆ, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಇದು ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿದ ಎಕ್ಸ್ಪ್ರೆಸ್ವೇ ಎಂದು ಹೇಳಿಕೊಂಡಿದ್ದಾರೆ.
Tried the new #Delhi_Mumbai_Expressway today. Only one word can describe it "Wow!". Amazing India – HC Wong@narendramodi @nitin_gadkari#BuildingTheNation #PragatiKaHighway #GatiShakti pic.twitter.com/pM3p28rBsw
— Singapore in India (@SGinIndia) February 19, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.