ಬಂಟ್ಟಾಳ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಧ್ವನಿಗೆ ಧನಿ ಗೂಡಿಸಿದವರು ಆರ್. ಎಸ್. ಎಸ್ ಕಾರ್ಯಕರ್ತರು. ಅಂದು ಜಯಪ್ರಕಾಶ್ ನಾರಾಯಣ್ ಆಡಿದ ಮಾತಾದ ತುರ್ತುಪರಿಸ್ಥಿತಿಯ ಹೋರಾಟಗಾರರನ್ನು ಫ್ಯಾಸಿಸ್ಟ್ ಎಂದು ಕರೆದರೆ ನಾನು ಕೂಡ ಫ್ಯಾಸಿಸ್ಟೇ ಎಂಬ ಮಾತನ್ನು ಕರ್ನಾಟಕ ಮೊದಲ ತುರ್ತುಪರಿಸ್ಥಿತಿಯ ಸತ್ಯಾಗ್ರಹಿ, ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಡಿ. ಎಚ್ ಶಂಕರಮೂರ್ತಿ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ತುರ್ತುಪರಿಸ್ಥಿತಿಯ ಒಂದು ನೆನಪು ಎಂಬ ವಿಚಾರ ಸಂಕಿರಣವನ್ನು ಪಾರಿವಾಳವನ್ನು ಪಂಜರದಿಂದ ಬಂಧನದಿಂದ ಮುಕ್ತಗೊಳಿಸುವುದರ ಮೂಲಕ ಉದ್ಘಾಟಿಸಿ ಮಾತಾನಾಡಿದರು.
ಇಂದಿರಾಗಾಂಧಿ ಅಲಹಾಬಾದ್ ಕೋರ್ಟು ನೀಡಿದ ತೀರ್ಪನ್ನು ತಿರಸ್ಕರಿಸಿ 1975 ಜೂನ್ 25 ರಂದು ತುರ್ತುಪರಿಸ್ಥಿತಿಯನ್ನು ಹೊರಡಿಸಿ ದೇಶದ್ಯಾದಂತ ಸಂಘದ ಕಾರ್ಯಕರ್ತರ ಮತ್ತು ಹೋರಾಟಗಾರರ ಮೇಲೆ ದಿಗ್ಬಂಧನ ಹೇರುತ್ತಾರೆ. ತುರ್ತುಪರಿಸ್ಥಿತಿ ದೇಶಕ್ಕೆ ಮಾರಕ ಅದು ತೊಲಗಬೇಕು ಎಂಬ ಧ್ಯೇಯವನ್ನಿಟ್ಟು 1975 ಸ್ವಾತಂತ್ರ್ಯಕ್ಕೋಸ್ಕರ ಕಾರ್ಯಕರ್ತರು ಹೋರಾಡಿದರು. ಆರ್.ಎಸ್.ಎಸ್. ಮತ್ತು ಭಾ.ಜ.ಪ. ಹೋರಾಟಗಾರರಿಗೆ ಯಾವುದೇ ಅಧಿಕಾರದ ಆಸೆಯಿರಲಿ ಬದಲಾಗಿ ದೇಶವನ್ನು ಸರ್ವಾಧಿಕಾರದಿಂದ ಮುಕ್ತಗೊಳಿಸುವ ಪಣ ತೊಟ್ಟಿದರು ಎಂದು ಹೇಳಿದರು.
ಅಂದಿನ ಹೋರಾಟದ ನಿಲುವು ಪ್ರಧಾನಿ ಮೋದಿಯವರ ಇಂದಿನ ಆಳ್ವಿಕೆಯಲ್ಲಿ ನಾವು ಕಾಣಬಹುದು. ಅಬ್ದುಲ್ ಕಲಾಂರವರ ಕನಸ್ಸಿನ ಭಾರತದ ಯೋಜನೆಗೆ ಇಂದಿನ ಯುವ ಜನಾಂಗ ಮುನ್ನಡೆಯಾಗಬೇಕು ಎಂದರು.
ತನ್ನ ಅನುಭವದ ಕಥನವನ್ನು ತೆರೆದಿಟ್ಟ ಡಿ. ಎಚ್ ಮೂರ್ತಿಯವರು ಜೈಲಿನಲ್ಲಿ ಭಾರತ್ ಮಾತಾಕೀ ಜೈ ಎಂದು ಹೇಳಿದಾಗ ಪೋಲೀಸರು ಇವರನ್ನು ದೇಶ ದ್ರೋಹಿ ಎಂದು ಕರೆಯುತ್ತಾರೆ. ಈ ಮಾತು ದೇಶ ದ್ರೋಹಿಯ ಮಾತಾದರೆ ನನಗೆ ಗಲ್ಲು ಶಿಕ್ಷೆ ಕೊಡಿ ಎಂದು ಹೇಳಿದ ಆ ಸಂದರ್ಭವನ್ನು ನೆನಪಿಸಿದರು.
1975ರ ಹೋರಾಟದಲ್ಲಿ ಪ್ರಪಂಚದ ಅಗ್ರರಾಷ್ಟ್ರಗಳಲ್ಲಿ ಒಬ್ಬ ಉತ್ತಮ ಪ್ರಭಾವಿ ವ್ಯಕ್ತಿ ಸಿಕ್ಕಿದ್ದಾರೆ ಎಂದರೆ ಶೇಷಾದ್ರಿ ರಾಮಣ್ಣರವರಂತಹ ಪ್ರೇರಣಾ ಕರ್ತರುಗಳಿಂದ ಎಂದರು. ಈ ಸಂದರ್ಭದಲ್ಲಿ ದೇಶಾದಾದ್ಯಂತ ಹೋರಾಟನೆಗೆ ಪ್ರಚೋದನೆ ನೀಡಿದ ವಾಜಪೇಯಿ, ಆಡ್ವಾಣಿ, ದಂಡಾವತಿ ಇವರು ಭಾರತ ಮಾತಾ ಕೀ ಜೈ ಎಂದು ಭಾರತ ಮಾತೆಗಾಗಿ ಘೋಷಣೆ ಕೂಗಿದ್ದಕ್ಕೆ ಇಂದಿರಾಗಾಂಧಿ ಸರಕಾರ ಇವರುಗಳನ್ನು ಬಂಧಿಸಿತು ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ತುರ್ತುಪರಿಸ್ಥಿತಿಯಲ್ಲಿ ಅತ್ಯಂತ ಪ್ರಭಾವಿ ಸಾಧನವಾದ ಕಹಳೆ ಪತ್ರಿಕೆಯ ಪ್ರಚಾರದ ನೆನಪಿನ ಬುತ್ತಿಯನ್ನು ತೆರೆದಿಟ್ಟರು. ಬ್ರಿಟೀಷ್ ಸರಕಾರಕ್ಕಿಂತಲು ಇಂದಿರಗಾಂಧಿ ಸರಕಾರದ ಆಳ್ವಿಕೆಯಲ್ಲಿ ಜನ ರೈತರು, ಹೋರಾಟಗಾರರು ಜಾಸ್ತಿ ಲಾಠಿ ಏಟು ತಿಂದರು. ಆ ಕಾಲದಲ್ಲಿ ಅನೇಕ ಹೋರಾಟಗಾರರಿಗೆ ಮನೆಯ ತಾಯಂದಿರೇ ಸ್ಫೂರ್ತಿಯ ಶಕ್ತಿಯಾದರು ಎಂದರು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಾಯಾಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಕಲ್ಲಡ, ಪ್ರಾಚಾರ್ಯರಾದ ಕೃಷ್ಣಪ್ರಸಾದ ಕಾಯರ್ಕಟ್ಟೆ ಉಪಸ್ಥಿತರಿದ್ದರು. ಕುಟುಂಬ ಪ್ರಭೋಧನ್ ಪ್ರಮುಖ್ ಸು.ರಾಮಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು.
1975-77ರ ನಡುವಿನ ತುರ್ತುಪರಿಸ್ಥಿತಿಯ ವಿವಿಧ ಘಟನಾವಳಿಗಳ ಸಚಿತ್ರವಾಗಿರುವಂತಹ ಭುಗಿಲು ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ತುರ್ತುಪರಿಸ್ಥಿತಿಯ ಸಂದರ್ಭ ನೆನಪು ಮಾಡುವಂತಹ ಹೇಳಿಕೆ, ಚಿತ್ರಗಳು ಮತ್ತು ಪತ್ರಿಕೆಗಳನ್ನೊಳಗೊಂಡ ಘಟನಾವಳಿಗಳ ಪ್ರದರ್ಶಿನಿಯ ಉದ್ಘಾಟನೆಯನ್ನು ತುರ್ತುಪರಿಸ್ಥಿತಿಯ ಮೀಸಾಬಂಧಿ ಹೋರಾಟಗಾರ್ತಿ ಸುಮತಿ ಶೆಣೈ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
೨೨೦ ತುರ್ತುಪರಿಸ್ಥಿತಿಯ ಮೀಸಾಬಂಧಿ ಹೋರಾಟಗಾರರು, ಮಂಗಳೂರು ವಿಶ್ವವಿದ್ಯಾನಿಲಯದ 32ಕಾಲೇಜುಗಳಿಂದ 134ವಿದ್ಯಾರ್ಥಿಗಳು, 37 ಉಪನ್ಯಾಸಕರು, 80 ಬೇರೆ ಬೇರೆ ಸಂಘದ ಪ್ರತಿನಿಧಿಗಳು, ಒಟ್ಟು 969 ಮಂದಿ ಭಾಗವಹಿಸಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ಮಾಧವ ಸ್ವಾಗತಿಸಿ, ಉಪನ್ಯಾಸಕರಾದ ರಾಜರಾಮವರ್ಮ ಮತ್ತು ಹರೀಶ್ ವಂದಿಸಿ, ಯತಿರಾಜ್, ಉಪನ್ಯಾಸಕಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.