News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‌3ನೇ ಬಾರಿಗೆ ಗ್ರ್ಯಾಮಿ ಪಡೆದ ರಿಕ್ಕಿ ಕೇಜ್: ಅನುರಾಗ್‌ ಠಾಕೂರ್‌ ಅಭಿನಂದನೆ

ನವದೆಹಲಿ: ಭಾರತದ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಅವರು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮಹತ್ವದ ಸಾಧನೆಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ರಿಕ್ಕಿ ಕೇಜ್ ಅವರನ್ನು ಅಭಿನಂದಿಸಿದ್ದು, ರಿಕ್ಕಿ ಅವರ ಸಂಗೀತವು 75 ನೇ ಕೇನ್ಸ್‌ನಲ್ಲಿ ಪ್ರೇಕ್ಷಕರನ್ನು ಮಂತ್ರಿ ಮುಗ್ಧಗೊಳಿಸಿತ್ತು ಮತ್ತು ಪರಿಸರದೊಂದಿಗೆ ಸಾಮರಸ್ಯದಿಂದ ಬದುಕುವ ಸಂದೇಶವನ್ನು ಹರಡಿತು ಎಂದು ಹೇಳಿದ್ದಾರೆ.

65ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭವು ಮಹತ್ವದ ಜಾಗತಿಕ ಸಂಗೀತ ಪ್ರಶಸ್ತಿ ಸಮಾರಂಭವಾಗಿದ್ದು, ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿದೆ. ಇದರಲ್ಲಿ ರಿಕ್ಕಿ ಅವರ ಡಿವೈನ್ ಟೈಡ್ಸ್ ಆಲ್ಬಮ್ ಗೆ ಪ್ರಶಸ್ತಿ ಲಭಿಸಿದೆ. ಇದರಲ್ಲಿ 9 ಹಾಡುಗಳು 8 ಮ್ಯೂಸಿಕ್ ವಿಡಿಯೋಗಳಿವೆ

ಗ್ರ್ಯಾಮಿ ವಿಜೇತ ಸಂಗೀತ ಸಂಯೋಜಕ ರಿಕ್ಕಿ ಅವರು ಟ್ವಿಟ್ ಮಾಡಿ ಪ್ರಶಸ್ತಿಯನ್ನು ಭಾರತಕ್ಕೆ ಸಮರ್ಪಿಸುವುದಾಗಿ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top