ಇಸ್ತಾಂಬುಲ್: ಆಗ್ನೇಯ ಟರ್ಕಿಯಲ್ಲಿ ಇಂದು 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಭಾರೀ ನಷ್ಟ ಸಂಭವಿಸಿದೆ. ವರದಿಗಳ ಪ್ರಕಾರ, 15 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣ ಹಾನಿಯುಂಟಾಗಿದೆ. ನೆರೆಯ ಸಿರಿಯಾದಲ್ಲೂ ಹಾನಿಯುಂಟಾಗಿದೆ.
ಯುಎಸ್ ಜಿಯೋಲಾಜಿಕಲ್ ಸರ್ವೆ ನೀಡಿದ ಮಾಹಿತಿಯ ಪ್ರಕಾರ, ಹಲವಾರು ನಗರಗಳಲ್ಲಿ ಕಟ್ಟಡಗಳು ಭೂಕಂಪದ ತೀವ್ರತೆಗೆ ನೆಲಸಮಗೊಂಡಿದೆ. ಸ್ಥಳೀಯ ಅಧಿಕಾರಿಗಳು ನೀಡಿದ ಆರಂಭಿಕ ಸಾವಿನ ಸಂಖ್ಯೆ 90. ಆದರೆ ಅದು ಹೆಚ್ಚಾಗುವ ಸಾಧ್ಯತೆ ಇದೆ.
ಈ ನಡುವೆ ಟರ್ಕಿ ಅಧ್ಯಕ್ಷರು ಟ್ವಿಟ್ ಮಾಡಿ ತಮ್ಮ ನಾಗರಿಕರಿಗೆ ಸಾಂತ್ವನ ನೀಡಿದ್ದಾರೆ.
“ಭೂಕಂಪದಿಂದ ಸಂತ್ರಸ್ತರಾದ ನಮ್ಮ ಎಲ್ಲಾ ನಾಗರಿಕರಿಗೆ ನಾನು ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ನಾವು ಸಾಧ್ಯವಾದಷ್ಟು ಬೇಗ ಮತ್ತು ಕನಿಷ್ಠ ಹಾನಿಯೊಂದಿಗೆ ಈ ದುರಂತದಿಂದ ಹೊರಬರುತ್ತೇವೆ ಎಂದು ನಾನು ಆಶಿಸುತ್ತೇನೆ” ಎಂದು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಟ್ವೀಟ್ ಮಾಡಿದ್ದಾರೆ
ಭೂಕಂಪವು ದಕ್ಷಿಣ ಟರ್ಕಿ ಮತ್ತು ನೆರೆಯ ಸಿರಿಯಾದ ಪ್ರಮುಖ ನಗರಗಳಾದ್ಯಂತ ಅನೇಕ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಹಿಂಸಾಚಾರದಿಂದ ನಲುಗಿದ ಈ ನಗರಗಳು ಇದೀಗ ಭೂಕಂಪಕ್ಕೆ ಒಳಗಾಗಿದ್ದು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ.
Horrific news of tonight’s earthquake in #Turkey & northern #Syria — the damage looks extensive.
The epicenter region is home to millions of refugees and IDPs, many of whom live in tents & makeshift structures. This is the absolute nightmare scenario for them. And it’s winter. pic.twitter.com/oACzWYtWb2
— Charles Lister (@Charles_Lister) February 6, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.