News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಏರೋ ಇಂಡಿಯಾ: ʼಇಂಡಿಯಾ ಪೆವಿಲಿಯನ್‌ʼನಲ್ಲಿ ತೇಜಸ್‌ ಪ್ರಮುಖ ಆಕರ್ಷಣೆ

ಬೆಂಗಳೂರು:  ಫೆಬ್ರವರಿ 13ರಿಂದ ಫೆಬ್ರವರಿ 17ರವರೆಗೆ ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. ಈ ಏರೋ ಇಂಡಿಯಾದ ʼಇಂಡಿಯಾ ಪೆವಿಲಿಯನ್‌ʼನಲ್ಲಿ ತೇಜಸ್‌ ಯುದ್ಧ ವಿಮಾನ ಪ್ರಮುಖ ಆಕರ್ಷಣೆಯಾಗಲಿದೆ.

ರಕ್ಷಣಾ ಸಚಿವಾಲಯವು ಆಯೋಜಿಸಿರುವ ದ್ವೈವಾರ್ಷಿಕ ಏರೋ ಶೋ ಮತ್ತು ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಯಲ್ಲಿ ಫಿಕ್ಸೆಡ್ ವಿಂಗ್ ಪ್ರದೇಶದಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸಲು ‘ಫಿಕ್ಸೆಡ್ ವಿಂಗ್ ಪ್ಲಾಟ್‌ಫಾರ್ಮ್’ ಥೀಮ್ ಆಧಾರಿತ ಪ್ರತ್ಯೇಕ “ಇಂಡಿಯಾ ಪೆವಿಲಿಯನ್” ಅನ್ನು ಹೊಂದಿರಲಿದೆ ಎಂದು ಗುರುವಾರ ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇಂಡಿಯಾ ಪೆವಿಲಿಯನ್ ಎಲ್‌ಸಿಎ-ತೇಜಸ್ ಯುದ್ಧ ವಿಮಾನಗಳ ವಿವಿಧ ರಚನಾತ್ಮಕ ಮಾಡ್ಯೂಲ್‌ಗಳು, ಸಿಮ್ಯುಲೇಟರ್‌ಗಳು ಮತ್ತು ಸಿಸ್ಟಮ್‌ಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ.

ಇಂಡಿಯಾ ಪೆವಿಲಿಯನ್‌ನ ರಕ್ಷಣಾ ಬಾಹ್ಯಾಕಾಶ, ಹೊಸ ತಂತ್ರಜ್ಞಾನಗಳು ಮತ್ತು UAV ವಿಭಾಗವು ಪ್ರತಿ ವಲಯದಲ್ಲಿ ಭಾರತದ ಬೆಳವಣಿಗೆಯ ಒಳನೋಟವನ್ನು ನೀಡುತ್ತದೆ.

ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ ಪ್ರದರ್ಶನವನ್ನು “ದ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್” ಎಂಬ ಥೀಮ್‌ನೊಂದಿಗೆ ಆಯೋಜಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top