News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 8th February 2023


×
Home About Us Advertise With s Contact Us

ಗಣರಾಜ್ಯೋತ್ಸವ ಪರೇಡ್: ನೌಕಾಪಡೆ ತಂಡಕ್ಕೆ ಮಂಗಳೂರಿನ ದಿಶಾ ಅಮೃತ್ ನೇತೃತ್ವ

ನವದೆಹಲಿ: 144 ಯುವ ನಾವಿಕರ ಭಾರತೀಯ ನೌಕಾಪಡೆಯ ಗಣರಾಜ್ಯೋತ್ಸವ ತಂಡದ ನೇತೃತ್ವ ವಹಿಸುವ ಮೂಲಕ ಮಹಿಳಾ ನೌಕಾ ವಾಯು ಕಾರ್ಯಾಚರಣೆಯ ಅಧಿಕಾರಿಯಾಗಿರುವ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಅವರು ‘ನಾರಿ ಶಕ್ತಿ’ಯನ್ನು ಪ್ರದರ್ಶಿಸಲಿದ್ದಾರೆ.

ನೌಕಾಸೇನೆಯ ಲೆಫ್ಟಿನೆಂಟ್‌ ಕಮಾಂಡರ್‌ ಆಗಿರುವ 29 ವರ್ಷದ ದಿಶಾ ಅಮೃತ್ ಅವರು ಮಂಗಳೂರಿನವರು. ಕರ್ನಾಟಕದ BMS ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪಡೆದಿರುವ ಇವರು  2008 ರಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಗಣರಾಜ್ಯೋತ್ಸವ ತಂಡದ ಭಾಗವಾಗಿದ್ದರು.

ಇವರು 2016ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿದ್ದು, 2017ರಲ್ಲಿ ತರಬೇತಿ ಮುಗಿಸಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪ್ರಮುಖ ನೌಕಾಪಡೆಗೆ ನಿಯೋಜನೆಗೊಂಡಿದ್ದರು.

“ನನ್ನ ತಂದೆ ಕೂಡ ಸೇವೆಯ ಭಾಗವಾಗಲು ಬಯಸಿದ್ದರು ಆದರೆ ಸಾಧ್ಯವಾಗಲಿಲ್ಲ. ನಾನು ನೌಕಾಪಡೆಯ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಮತ್ತು ನೌಕಾಪಡೆಗೆ ಪೂರ್ಣ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುತ್ತೇನೆ” ಎಂದು ದಿಶಾ ಹೇಳಿದ್ದಾರೆ.

“ನಾನು ಡೋರ್ನಿಯರ್ ವಿಮಾನದ ಏವಿಯೇಟರ್ ಆಗಿದ್ದೇನೆ ಮತ್ತು ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top