News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಕೆ-203 ಕಲಾಶ್ನಿಕೋವ್ ಅಸಾಲ್ಟ್ ರೈಫಲ್‌ ಉತ್ಪಾದನೆ ಆರಂಭಿಸಿದ ಭಾರತ-ರಷ್ಯಾ ಜಂಟಿ ಉದ್ಯಮ

ನವದೆಹಲಿ: ಭಾರತ ಮತ್ತು ರಷ್ಯಾ ನಡುವಿನ ಜಂಟಿ ಉದ್ಯಮವಾದ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಉತ್ತರ ಪ್ರದೇಶದ ಕೊರ್ವಾದಲ್ಲಿ ಎಕೆ-203 ಕಲಾಶ್ನಿಕೋವ್ ಅಸಾಲ್ಟ್ ರೈಫಲ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿದೆ ಎಂದು ರಷ್ಯಾದ ರೋಸೊಬೊರೊನೆಕ್ಸ್‌ಪೋರ್ಟ್‌ನ ಮಹಾನಿರ್ದೇಶಕ ಅಲೆಕ್ಸಾಂಡರ್ ಮಿಖೀವ್ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಕಳೆದ ವಾರ 5,000 ರೈಫಲ್‌ಗಳ ಮೊದಲ ಬ್ಯಾಚ್ ಅನ್ನು ಮಾರ್ಚ್‌ನೊಳಗೆ ಸೇನೆಗೆ ತಲುಪಿಸಲಾಗುವುದು ಎಂದು ಹೇಳಿದ್ದರು.

ಇಂದು ಬಿಡುಗಡೆಯಾದ ರೊಸೊಬೊರೊನೆಕ್ಸ್‌ಪೋರ್ಟ್ ಪತ್ರಿಕಾ ಹೇಳಿಕೆಯಲ್ಲಿ, “ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಕೊರ್ವಾ ಆರ್ಡನೆನ್ಸ್ ಫ್ಯಾಕ್ಟರಿಯು ಮೊದಲ ಬ್ಯಾಚ್ 7.62 ಎಂಎಂ ಕಲಾಶ್ನಿಕೋವ್ ಎಕೆ -203 ಅಸಾಲ್ಟ್ ರೈಫಲ್‌ಗಳನ್ನು ತಯಾರಿಸಿದೆ. ಭಾರತೀಯ ಸೇನೆಗೆ ವಿತರಣೆಯು ಶೀಘ್ರ ಪ್ರಾರಂಭವಾಗುವ ನಿರೀಕ್ಷೆ ಇದೆ” ಎಂದಿದೆ.

ಉತ್ತಮ ಗುಣಮಟ್ಟದ, ಅನುಕೂಲಕರ ಮತ್ತು ಆಧುನಿಕ ಸಣ್ಣ ಶಸ್ತ್ರಾಸ್ತ್ರಗಳಾದ ಕಲಾಶ್ನಿಕೋವ್ ಎಕೆ-203 ಅಸಾಲ್ಟ್ ರೈಫಲ್‌ಗಳ ಸರಣಿ ಉತ್ಪಾದನೆ ಪ್ರಾರಂಭವಾದ ಬಳಿಕ ಅದು  ಭಾರತದ ರಕ್ಷಣಾ ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸೇವೆಗೆ ಪ್ರವೇಶಿಸಲು ಪ್ರಾರಂಭಿಸುತ್ತದೆ ಎಂದು ರೋಸ್ಟೆಕ್‌ನ ಜನರಲ್ ಡೈರೆಕ್ಟರ್ ಸೆರ್ಗೆ ಚೆಮೆಜೊವ್ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top