News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

1,470 ಯುನಿಟ್‌ ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ ಪಡೆಯಲಿದೆ ಭಾರತೀಯ ಸೇನೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ 1,470 ಸ್ಕಾರ್ಪಿಯೋ ಯೂನಿಟ್‌ಗಳನ್ನು ಭಾರತೀಯ ಸೇನೆಗೆ ತಲುಪಿಸಲು ಮಹೀಂದ್ರಾ ಸಂಸ್ಥೆ ಆದೇಶ ಪಡೆದುಕೊಂಡಿದೆ. ಈ ಪ್ರಸ್ತಾಪವನ್ನು ಸ್ವೀಕರಿಸಿರುವ ಮಹೀಂದ್ರ ವಾಹನ ಕಂಪನಿಯು ಭಾರತೀಯ ಸೇನೆಯ 12 ಘಟಕಗಳಿಗೆ 1,470 ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು  ಒದಗಿಸಲಿದೆ.

ಟ್ವೀಟ್‌ ಮಾಡಿರುವ ಮಹೀಂದ್ರಾ ಅಟೊಮೋಟಿವ್, “ರಾಷ್ಟ್ರದಾದ್ಯಂತ ಭಾರತೀಯ ಸೇನೆಯ 12 ಘಟಕಗಳಿಗೆ ಸ್ಕಾರ್ಪಿಯೋ ಕ್ಲಾಸಿಕ್‌ನ 1470 ಯುನಿಟ್‌ಗಳ ಆರ್ಡರ್‌ ಪಡೆದಿರುವುದನ್ನು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಭಾರತೀಯ ಸೇನೆಗೆ ಧನ್ಯವಾದಗಳು” ಎಂದಿದೆ.

ಮಿಲಿಟರಿ ಅವಶ್ಯಕತೆಗೆ ಅನುಗುಣವಾಗಿ ಸ್ಕಾರ್ಪಿಯೋ ಕ್ಲಾಸಿಕ್‌ಗೆ ಯಾವ ಬದಲಾವಣೆಗಳನ್ನು ಮಾಡುತ್ತದೆ ಎಂಬುದನ್ನು ಕಂಪನ ಸ್ಪಷ್ಟಪಡಿಸಿಲದಲ.

ಟಾಟಾ ಸಫಾರಿ, ಮಾರುತಿ ಸುಜುಕಿ ಜಿಪ್ಸಿ, ಫೋರ್ಸ್ ಗೂರ್ಖಾ ಮತ್ತು ಟಾಟಾ ಕ್ಸೆನಾನ್ ಸೇರಿದಂತೆ ವಿವಿಧ ವಾಹನಗಳನ್ನು ಭಾರತೀಯ ಸೇನೆಯು ಬಳಸುತ್ತದೆ. ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಸೇರ್ಪಡೆಯು ವಿವಿಧ ಕಾರ್ಯಗಳನ್ನು ನಿರ್ವಹಿಸುವಲ್ಲಿ ಅದರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top