News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದಲ್ಲಿ ಐದು 2G ಎಥೆನಾಲ್ ಜೈವಿಕ ಸಂಸ್ಕರಣಾಗಾರ ಸ್ಥಾಪಿಸಲಿದೆ ಕೇಂದ್ರ

ನವದೆಹಲಿ: ಸರ್ಕಾರವು ದೇಶದಲ್ಲಿ ಐದು 2G ಎಥೆನಾಲ್ ಜೈವಿಕ ಸಂಸ್ಕರಣಾಗಾರಗಳನ್ನು ಸ್ಥಾಪನೆ ಮಾಡಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಹರಿಯಾಣದ ಪಾಣಿಪತ್ (ಪರಾಲಿ), ಪಂಜಾಬ್‌ನ ಬಟಿಂಡಾ, ಒಡಿಶಾದ ಬರ್ಗಢ (ಪರಾಲಿ), ಅಸ್ಸಾಂನ ನುಮಾಲಿಗಢ (ಬಿದಿರು) ಮತ್ತು ಕರ್ನಾಟಕದ ದಾವಣಗೆರೆಯಲ್ಲಿ ಎಥೆನಾಲ್ ರಿಫೈನರಿ ಸ್ಥಾಪನೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

“ಭಾರತದ G20 ಪ್ರೆಸಿಡೆನ್ಸಿಯ ಸಮಯದಲ್ಲಿ ಅಮೆರಿಕಾ ಮತ್ತು ಬ್ರೆಜಿಲ್ ಜೊತೆಗೆ ನಾವು ಜೈವಿಕ ಇಂಧನಗಳ ಮೇಲೆ ಜಾಗತಿಕ ಒಕ್ಕೂಟವನ್ನು ಪ್ರಾರಂಭಿಸುತ್ತಿದ್ದೇವೆ” ಎಂದು ಪುರಿ ಆಟೋ ಎಕ್ಸ್ಪೋ-2023 ನಲ್ಲಿ ಹೇಳಿದರು.

ಆಟೋಮೋಟಿವ್ ಕಾಂಪೊನೆಂಟ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (ACMA), ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ಮತ್ತು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಮೂಲಕ ಗ್ರೇಟರ್ ನೋಯ್ಡಾದಲ್ಲಿ “ಸಾರಿಗೆ ಪ್ರಪಂಚವನ್ನು ಅನ್ವೇಷಿಸಿ” ಎಂಬ ಥೀಮ್‌ನೊಂದಿಗೆ ಆಟೋ ಎಕ್ಸ್‌ಪೋ 2023 ಅನ್ನು ಆಯೋಜಿಸಲಾಗಿದೆ.

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ವಿಷಯದಲ್ಲಿ ಭಾರತವು ಸಾಧಿಸಿರುವ ಪ್ರಗತಿಯ ಕುರಿತು ಮಾತನಾಡಿದ ಸಚಿವರು, ಸರ್ಕಾರವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು 2013-14 ರಲ್ಲಿ ಶೇಕಡಾ 1.53 ರಿಂದ 2022 ರಲ್ಲಿ ಶೇಕಡಾ 10.17 ಕ್ಕೆ ಹೆಚ್ಚಿಸಿದೆ ಎಂದು ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top