News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದೆ ಜೋಶಿಮಠ: ಇಸ್ರೋ ವರದಿ

ನವದೆಹಲಿ: ಉತ್ತರಾಖಂಡದ ಜೋಶಿಮಠ ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವರದಿ ಮಾಡಿದೆ.

ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ಡಿಸೆಂಬರ್ 27 ಮತ್ತು ಜನವರಿ 8 ರ ನಡುವೆ ಪಟ್ಟಣವು 5.4 ಸೆಂ.ಮೀ ಮುಳುಗಿದೆ ಎಂಬುದನ್ನು ತೋರಿಸುತ್ತಿವೆ.

ಜನವರಿ 2, 2022 ರಂದು ನಡೆದ ಕ್ಷಿಪ್ರ ಕುಸಿತದ ಘಟನೆಯಿಂದ ಬೃಹತ್ ಮಣ್ಣು ಕುಸಿತ ಸಂಭವಿಸಿದೆ ಎಂದು ಸಾಕ್ಷಿಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

ಮಧ್ಯ ಜೋಶಿಮಠದಲ್ಲಿ, ಸೇನಾ ಹೆಲಿಪ್ಯಾಡ್ ಮತ್ತು ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಮಣ್ಣಿನ ತ್ವರಿತ ಕುಸಿಯುವಿಕೆ ಸಂಭವಿಸಿದೆ. ಜೋಶಿಮಠ-ಔಲಿ ರಸ್ತೆಯ ಬಳಿ 2,180 ಮೀಟರ್ ಎತ್ತರದಲ್ಲಿ ಮುಳುಗುವಿಕೆಯ ಕೇಂದ್ರವಿದೆ ಎಂದು ಇಸ್ರೋ ವರದಿ ಹೇಳಿದೆ.

ಬದರಿನಾಥದಂತಹ ಜನಪ್ರಿಯ ಯಾತ್ರಾಸ್ಥಳಗಳ ಹೆಬ್ಬಾಗಿಲು ಎಂದು ಕರೆಯಲ್ಪಡುವ ಮುಳುಗುತ್ತಿರುವ  ಜೋಶಿಮಠ ಕಟ್ಟಡಗಳು ಮತ್ತು ರಸ್ತೆಗಳಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡು ದುರಂತದ ಅಂಚಿನಲ್ಲಿದೆ.

ಉಪಗ್ರಹ ಸಮೀಕ್ಷೆಯ ನಂತರ ಸುಮಾರು 4,000 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಹೋಟೆಲ್‌ಗಳು ಮತ್ತು ವ್ಯಾಪಾರ ಸಂಸ್ಥೆಗಳಲ್ಲದೆ, 678 ಮನೆಗಳು ಅಪಾಯದಲ್ಲಿವೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top