News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವದ ಅತಿ ಉದ್ದದ ನದಿ ವಿಹಾರ ಕ್ರೂಸ್ ʼಗಂಗಾ ವಿಲಾಸ್ʼ‌ಗೆ ಮೋದಿ ಚಾಲನೆ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಶ್ವದ ಅತಿ ಉದ್ದದ ನದಿ ವಿಹಾರ ಹಡಗು ʼಗಂಗಾ ವಿಲಾಸ್ʼ ಅನ್ನು ಉದ್ಘಾಟಿಸಿದ್ದಾರೆ. ಈ ಕ್ರೂಸ್ ಹಡಗು ಗಂಗಾ ವಿಲಾಸ್ ಭಾರತದಲ್ಲಿ ತಯಾರಾದ ಮೊದಲ ಐಷಾರಾಮಿ ಕ್ರೂಸ್‌ ಆಗಿದ್ದು, ಇದು ರಿವರ್ ಕ್ರೂಸ್ ವಲಯದಲ್ಲಿ ಸ್ವಾವಲಂಬನೆಯ ಸಂಕೇತವಾಗಿ ಇಂದು ತನ್ನ ಕಾರ್ಯಾಚರಣೆ ಆರಂಭಿಸುತ್ತಿದೆ.

ಈ ವೇಳೆ ಮಾತನಾಡಿದ ಮೋದಿ, “ನಾನು ಗಂಗಾ ವಿಲಾಸ್‌ನ ರಿವರ್ ಕ್ರೂಸ್ ಲೈನರ್‌ನಲ್ಲಿರುವ ಪ್ರಯಾಣಿಕರಿಗೆ ಹೇಳಲು ಬಯಸುವುದೇನೆಂದರೆ ಈ ಕ್ರೂಸ್ ನೀವು ಊಹಿಸಬಹುದಾದ ಎಲ್ಲವನ್ನೂ ಹೊಂದಿದೆ. ಇದು ನಿಮ್ಮ ಕಲ್ಪನೆಗೂ ಮೀರಿದ ಬಹಳಷ್ಟನ್ನು ಹೊಂದಿದೆ. ಭಾರತವನ್ನು ಪದಗಳಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಅದನ್ನು ಹೃದಯದಿಂದ ಅನುಭವಿಸಬೇಕು, ಭಾರತವು ಎಲ್ಲರಿಗೂ ತನ್ನ ಹೃದಯವನ್ನು ತೆರೆದಿದೆ ಎಂದಿದ್ದಾರೆ.

“ಈ ಕ್ರೂಸ್‌ನ ಆರಂಭವು ದೇಶದ ಒಳನಾಡಿನ ಜಲಮಾರ್ಗಗಳ ವ್ಯಾಪಕ ಅಭಿವೃದ್ಧಿಗೆ ಸಾಕ್ಷಿಯಾಗಿದೆ. 24 ರಾಜ್ಯಗಳಾದ್ಯಂತ 111 ರಾಷ್ಟ್ರೀಯ ಜಲ ಹೆದ್ದಾರಿಗಳ ಅಭಿವೃದ್ಧಿಗೆ ಕೆಲಸ ಮಾಡಲಾಗುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಕ್ರೂಸ್ 50 ದಿನಗಳಲ್ಲಿ ಸುಮಾರು 4,000 ಕಿ.ಮೀ ದೂರವನ್ನು ಕ್ರಮಿಸಲಿದೆ. ಇದು ಭಾರತ ಮತ್ತು ಬಾಂಗ್ಲಾದೇಶದ ನದಿಗಳ ಮೂಲಕ ಹಾದು ಅಸ್ಸಾಂನ ದಿಬ್ರುಗಢವನ್ನು ತಲುಪಲಿದೆ. ಇದು ಪಾಟ್ನಾ, ಕೋಲ್ಕತ್ತಾ ಮತ್ತು ಢಾಕಾದಂತಹ ಪ್ರಮುಖ ನಗರಗಳ ಬಳಿ ನಿಲುಗಡೆಗಳನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೂಸ್ 18 ಸೂಟ್‌ಗಳೊಂದಿಗೆ 80 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುತ್ತದೆ. ಕ್ರೂಸ್ ವಾರಣಾಸಿಯಿಂದ ಹೊರಟು ಪಾಟ್ನಾ ಮತ್ತು ಕೋಲ್ಕತ್ತಾ ತಲುಪಲಿದೆ. ಇದರ ನಂತರ, ಅದು ಬಾಂಗ್ಲಾದೇಶಕ್ಕೆ ಹೊರಟು, ಭಾರತವನ್ನು ಮರು-ಪ್ರವೇಶಿಸುತ್ತದೆ ಮತ್ತು ಅಸ್ಸಾಂನ ದಿಬ್ರುಗಢದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ. 50 ದಿನಗಳ ಪ್ರಯಾಣದ ಮೂಲಕ ಕ್ರೂಸ್ ಹಲವಾರು ವಿಶ್ವ ಪಾರಂಪರಿಕ ತಾಣಗಳು ಸೇರಿದಂತೆ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಿಲ್ಲಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ತನ್ನ ಪ್ರಯಾಣದ ಅವಧಿಯಲ್ಲಿ ಹಲವಾರು ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳ ಮೂಲಕ ಹಾದುಹೋಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top