News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಿರಂತರ ಬೆದರಿಕೆ: ಗನ್‌ ಲೈಸೆನ್ಸ್‌ ಪಡೆದ ನೂಪುರ್‌ ಶರ್ಮಾ

ನವದೆಹಲಿ:  ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರಿಗೆ ಗನ್‌ ಲೈಸೆನ್ಸ್‌ ದೊರಕಿದೆ.  ಜೀವಕ್ಕೆ ಅಪಾಯವಿರುವುದರಿಂದ ಶಸ್ತ್ರಾಸ್ತ್ರ ಹೊಂದಲು ಅನುಮತಿ ನೀಡುವಂತೆ ಅವರು ಕೋರಿದ್ದರು. ಪ್ರವಾದಿ ಮೊಹಮ್ಮದ್ ಬಗ್ಗೆ ಆಕೆ ನೀಡಿದ ವಿವಾದಾತ್ಮಕ ಹೇಳಿಕೆಯ ಪರಿಣಾಮವಾಗಿ ಆಕೆಗೆ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಲೇ ಇವೆ.

ಮೇ 26, 2022 ರಂದು, ನೂಪುರ್ ಶರ್ಮಾ ಟಿವಿ ಚರ್ಚೆಯ ಸಮಯದಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅವರ ಹೇಳಿಕೆ ಹಲವಾರು ಸ್ಥಳಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು. ಅಲ್ಲದೇ ನೂಪುರ್ ಶರ್ಮಾ ಅವರನ್ನು ಜೈಲಿಗೆ ಹಾಕುವಂತೆ ಒತ್ತಡಗಳನ್ನೂ ಹೇರಲಾಗಿತ್ತ. ಶಿರಚ್ಛೇದ ಮಾಡುವ ಕರೆಯನ್ನೂ ನೀಡಲಾಗಿತ್ತು.

ಬೆದರಿಕೆಗಳ ಹಿನ್ನೆಲೆಯಲ್ಲಿ ಅವರು ಮನೆಯಿಂದ ಹೊರ ಹೋಗದ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾಗಿ ಅವರು ಗನ್‌ ಲೈಸೆನ್ಸ್‌ ಪಡೆಯಲು ಅರ್ಜಿ ಹಾಕಿದ್ದರು. ಇದೀಗ ಅವರಿಗೆ ಲೈಸೆನ್ಸ್‌ ದೊರೆತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top