News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾರಣಾಸಿಗೆ ಆಗಮಿಸಿದ ಐಷಾರಾಮಿ ಗಂಗಾ ವಿಲಾಸ್‌ ಕ್ರೂಸ್

ವಾರಣಾಸಿ: ಜನವರಿ 13ರಂದು ಪ್ರಧಾನಿ ನರೇಂದ್ರ ಮೋದಿವರಿಂದ ಉದ್ಘಾಟನೆಗೊಳ್ಳಲಿರುವ ಕೋಲ್ಕತ್ತಾ-ವಾರಣಾಸಿ ಕ್ರೂಸ್‌ ಯಾನಕ್ಕಾಗಿ ಐಷಾರಾಮಿ ಗಂಗಾ ವಿಲಾಸ್‌ ಕ್ರೂಸ್‌ ಕೋಲ್ಕತ್ತಾದಿಂದ ವಾರಣಾಸಿಗೆ ಆಗಮಿಸಿದೆ.

ಡಿಸೆಂಬರ್ 22 ರಂದು ಕೋಲ್ಕತ್ತಾದಿಂದ ಹೊರಟ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯ ರಾಮನಗರ ಬಂದರಿಗೆ ಆಗಮಿಸಿದೆ ಮತ್ತು ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಇದರ ಯಾನಕ್ಕೆ ಚಾಲನೆ ನೀಡಲಿದ್ದಾರೆ.

ವಿಶ್ವದ ಅತಿ ಉದ್ದದ ನದಿ ವಿಹಾರ ರಾಮನಗರದಿಂದ ಹೊರಟು ಸಂತ ರವಿದಾಸ್ ಘಾಟ್‌ಗೆ ಆಗಮಿಸಲಿದ್ದು, ಅಲ್ಲಿ ಭವ್ಯ ಸ್ವಾಗತ ದೊರೆಯಲಿದೆ. ಕ್ರೂಸ್ ಆರಂಭದಲ್ಲಿ ವಾರಣಾಸಿಗೆ ಶನಿವಾರ ಆಗಮಿಸುವ ನಿರೀಕ್ಷೆಯಿತ್ತು ಆದರೆ ಮೂಲಗಳ ಪ್ರಕಾರ ಪ್ರತಿಕೂಲ ಹವಾಮಾನದಿಂದಾಗಿ ವಿಳಂಬವಾಗಿ ನಿನ್ನೆ ಆಗಮಿಸಿದೆ.

ವಾರಣಾಸಿಯಿಂದ ಅಸ್ಸಾಂನ ದಿಬ್ರುಗಢ್‌ಗೆ ವಿಶ್ವದ ಅತಿ ಉದ್ದದ ಜಲಮಾರ್ಗದಲ್ಲಿ ಪ್ರಯಾಣಿಸುವ ಐಷಾರಾಮಿ ಕ್ರೂಸ್ ಒಟ್ಟು  3,200 ಕಿಮೀ ದೂರವನ್ನು ಕ್ರಮಿಸುತ್ತದೆ ಮತ್ತು ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳ ಮೂಲಕ ಹಾದುಹೋಗುತ್ತದೆ.

ಈ ಯಾನದಲ್ಲಿ ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂನಾದ್ಯಂತ ಒಟ್ಟು 27 ನದಿ ವ್ಯವಸ್ಥೆಗಳನ್ನು ಕ್ರೂಸ್‌ ದಾಟಲಿದೆ.  ಗಂಗಾ, ಮೇಘನಾ ಮತ್ತು ಬ್ರಹ್ಮಪುತ್ರ ಕ್ರೂಸ್ ಹಾದುಹೋಗುವ 3 ಪ್ರಮುಖ ನದಿಗಳು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top