News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಥಾಯ್ ನೌಕಾ ವಾಯುನೆಲೆಯಲ್ಲಿ IAF ತುಕಡಿಗೆ ಸ್ವಾಗತ

ನವದೆಹಲಿ: ಭಾರತೀಯ ವಾಯುಸೇನೆಯ ತುಕಡಿ ‘ವೀರ್ ಗಾರ್ಡಿಯನ್-2023’ ಜಂಟಿ ಸಮರಾಭ್ಯಾಸದಲ್ಲಿ ಭಾಗಿಯಾಗಲು ಜಪಾನ್‌ಗೆ ತೆರಳಲಿದ್ದು, ಮಾರ್ಗ ಮಧ್ಯ ಥೈಲ್ಯಾಂಡ್‌ಗೆ ತಲುಪಿದ ತುಕಡಿಯನ್ನು ಭಾರತೀಯ ರಾಯಭಾರ ಕಚೇರಿ ಸ್ವಾಗತಿಸಿದೆ.

ಥಾಯ್ಲೆಂಡ್‌ನ ಭಾರತೀಯ ರಾಯಭಾರಿ ನಾಗೇಶ್ ಸಿಂಗ್ ಅವರು ಬ್ಯಾಂಕಾಕ್‌ನ ಆಗ್ನೇಯ ಭಾಗದಲ್ಲಿರುವ ಯು-ತಪಾವೊ ನೌಕಾ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯ  ತುಕಡಿಯನ್ನು ಸ್ವೀಕರಿಸಿದರು. ಥಾಯ್ ನೆಲೆಗೆ ಆಗಮಿಸಿದ ಭಾರತೀಯ ತುಕಡಿಯು ಜಂಟಿ ವಾಯು ವ್ಯಾಯಾಮ ‘ವೀರ್ ಗಾರ್ಡಿಯನ್-2023’ ಗಾಗಿ ಜಪಾನ್‌ಗೆ ತೆರಳುತ್ತಿದೆ.

“ರಾಯಭಾರಿ ನಾಗೇಶ್ ಸಿಂಗ್ ಅವರು ಯು-ತಪಾವೊ ನೇವಲ್ ಏರ್ ಬೇಸ್‌ನಲ್ಲಿ ಭಾರತೀಯ ವಾಯುಪಡೆಯ ತುಕಡಿಯನ್ನು ಸ್ವೀಕರಿಸಿದರು. ಜನವರಿ 12-26ರವರೆಗೆ  ಜಪಾನ್ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನೊಂದಿಗೆ ಚೊಚ್ಚಲ ವ್ಯಾಯಾಮ ವೀರ್ ಗಾರ್ಡಿಯನ್ 2023 ನಲ್ಲಿ ಭಾಗವಹಿಸಲು ತಂಡವು ಜಪಾನ್‌ಗೆ ತೆರಳಲಿದೆ” ಎಂದು ಥೈಲ್ಯಾಂಡ್‌ನಲ್ಲಿನ ಭಾರತೀಯ ಮಿಷನ್ ಟ್ವೀಟ್ ಮಾಡಿದೆ.

ಥಾಯ್ ಬೇಸ್‌ಗೆ ಆಗಮಿಸಿದ ಭಾರತೀಯ ತುಕಡಿಯು ಜ.12 ರಿಂದ ಜಪಾನಿನ ಹಯಕುರಿ ಏರ್ ಬೇಸ್‌ನಲ್ಲಿ ಭಾರತೀಯ ವಾಯುಪಡೆ ಮತ್ತು ಜಪಾನ್ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್ (ಜೆಎಎಸ್‌ಡಿಎಫ್) ಒಳಗೊಂಡ ಜಂಟಿ ವಾಯು ವ್ಯಾಯಾಮ ‘ವೀರ್ ಗಾರ್ಡಿಯನ್-2023’ ಗಾಗಿ ಜಪಾನ್‌ಗೆ ತೆರಳುತ್ತಿದೆ.

ವಾಯು ವ್ಯಾಯಾಮದಲ್ಲಿ ಭಾಗವಹಿಸುವ ಭಾರತೀಯ ತಂಡವು ನಾಲ್ಕು Su-30 MKI, ಎರಡು C-17 ಮತ್ತು ಒಂದು IL-78 ವಿಮಾನಗಳನ್ನು ಒಳಗೊಂಡಿರುತ್ತದೆ, ಜಪಾನ್‌ ವಾಯುಸೇನೆ ನಾಲ್ಕು F-2 ಮತ್ತು ನಾಲ್ಕು F-15 ವಿಮಾನಗಳೊಂದಿಗೆ ಭಾಗವಹಿಸಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top