News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಿಯೋದ 5ಜಿ ಸೇವೆಗಳು ಈಗ ದೇಶದ 72 ನಗರಗಳಲ್ಲಿ ಲಭ್ಯ

ನವದೆಹಲಿ: ಜಿಯೋದ 5ಜಿ ಸೇವೆಗಳು ಈಗ ದೇಶದ 72 ನಗರಗಳಲ್ಲಿ ಲಭ್ಯವಿದೆ. ಇತ್ತೀಚೆಗಷ್ಟೇ ಗ್ವಾಲಿಯರ್, ಜಬಲ್ಪುರ್, ಲುಧಿಯಾನ ಮತ್ತು ಸಿಲಿಗುರಿಯಲ್ಲಿ ಜಿಯೋ ತನ್ನ 5ಜಿ ಸೇವೆಗಳನ್ನು ವಿಸ್ತರಿಸಿದೆ. ಈ ಮೂಲಕ ಜಿಯೋ 5ಜಿ ಲಭ್ಯವಿರುವ ಒಟ್ಟು ನಗರಗಳ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಜಿಯೋ 5ಜಿ ಸೇವೆಗಳನ್ನು ದೆಹಲಿ, ಮುಂಬೈ, ವಾರಣಾಸಿ, ಕೋಲ್ಕತ್ತಾ, ನಾಥದ್ವಾರ ಮತ್ತು ಚೆನ್ನೈನಲ್ಲಿ ಆರಂಭಿಸಿತ್ತು. ನವೆಂಬರ್ ತಿಂಗಳಲ್ಲಿ, ಇದನ್ನು ಬೆಂಗಳೂರು, ಹೈದರಾಬಾದ್, ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್ ಮತ್ತು ಪುಣೆಗೆ ವಿಸ್ತರಿಸಲಾಯಿತು. ನವೆಂಬರ್ 25ರಂದು, ಜಿಯೋ ಟ್ರೂ 5G ಅನ್ನು ಗುಜರಾತ್‌ನ ಎಲ್ಲಾ 33 ಜಿಲ್ಲೆಗಳಲ್ಲೂ ಬಿಡುಗಡೆ ಮಾಡಿತು.

ಡಿಸೆಂಬರ್‌ನಲ್ಲಿ ಉಜ್ಜಯಿನಿ ದೇವಸ್ಥಾನ, ಕೊಚ್ಚಿ, ಗುರುವಾಯೂರ್ ದೇವಸ್ಥಾನ, ತಿರುಮಲ, ವಿಜಯವಾಡ, ವಿಶಾಖಪಟ್ಟಣ, ಗುಂಟೂರು, ಲಖನೌ, ತಿರುವನಂತಪುರ, ಮೈಸೂರು, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್, ದೇರಬಸ್ಸಿ, ಭೋಪಾಲ್ ಮತ್ತು ಇಂದೋರ್ ನಗರಗಳಲ್ಲಿ ಜಿಯೋ 5ಜಿ ಸೇವೆ ಆರಂಭಗೊಂಡಿದೆ.

ಜನವರಿ ಮೊದಲ ವಾರದಲ್ಲಿ ಜಿಯೋ 5G ನೆಟ್‌ವರ್ಕ್ ಅನ್ನು ಭುವನೇಶ್ವರ, ಕಟಕ್, ಜಬಲ್‌ಪುರ, ಗ್ವಾಲಿಯರ್, ಲುಧಿಯಾನ ಮತ್ತು ಸಿಲಿಗುರಿಗೆ ವಿಸ್ತರಿಸಲಾಗಿದೆ.

ಈ ನಗರದಲ್ಲಿನ 5ಜಿ ಫಲಾನುಭವಿಗಳಿಗೆ ಜಿಯೋ ವೆಲ್‌ಕಮ್‌ ಆಫರ್‌ ಲಭ್ಯವಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top