News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪರೀಕ್ಷಾ ಪೇ ಚರ್ಚಾಗೆ 31 ಲಕ್ಷ ವಿದ್ಯಾರ್ಥಿಗಳು, 5 ಲಕ್ಷ ಶಿಕ್ಷಕರ ನೋಂದಣಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 27 ರಂದು ಪರೀಕ್ಷಾ ಪರ್ ಚರ್ಚಾದ 6 ನೇ ಆವೃತ್ತಿಯನ್ನು ನಡೆಸಲಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಕಾರ್ಯಕ್ರಮವು ನವದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಪರೀಕ್ಷಾ ಪರ್ ಚರ್ಚಾ ನೋಂದಣಿಗಳು ದುಪ್ಪಟ್ಟಾಗಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ರಾಜ್ಯ ಮಂಡಳಿಗಳು, CBSE, ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ ಮತ್ತು ಇತರ ಮಂಡಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ   ಭಾಗವಹಿಸುವ ನಿರೀಕ್ಷೆ ಇದೆ.

31 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ಐದು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು ಸುಮಾರು ಎರಡು ಲಕ್ಷ ಪೋಷಕರು ಪರೀಕ್ಷಾ ಪರ್ ಚರ್ಚಾಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. 150 ದೇಶಗಳ ವಿದ್ಯಾರ್ಥಿಗಳು, 51 ದೇಶಗಳ ಶಿಕ್ಷಕರು ಮತ್ತು 50 ದೇಶಗಳ ಪೋಷಕರು ಸಹ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಭಾಗವಹಿಸುವವರನ್ನು ಆಯ್ಕೆ ಮಾಡಲು 2022 ರ ನವೆಂಬರ್ 25 ಮತ್ತು ಡಿಸೆಂಬರ್ 30 ರ ನಡುವೆ ವಿವಿಧ ವಿಷಯಗಳ ಕುರಿತು ಆನ್‌ಲೈನ್ ಸೃಜನಶೀಲ ಬರವಣಿಗೆ ಸ್ಪರ್ಧೆಯನ್ನು ನಡೆಸಲಾಗಿತ್ತು.

ಪ್ರಧಾನಮಂತ್ರಿಯವರು ವಿಶಿಷ್ಟವಾದ ಸಂವಾದಾತ್ಮಕ ಪರಿಕಲ್ಪನೆಯ ಕಾರ್ಯಕ್ರಮ ಇದಾಗಿದ್ದು, ಇದರಲ್ಲಿ ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಮತ್ತು ವಿದೇಶದಿಂದಲೂ ಜನರು ಭಾಗಿಯಾಗಿ ಸಂವಹನ ನಡೆಸುತ್ತಾರೆ. ಜೀವನವನ್ನು ಉತ್ಸವವಾಗಿ ಆಚರಿಸಲು ಪರೀಕ್ಷೆಗಳ ಒತ್ತಡವನ್ನು ಹೇಗೆ ಜಯಿಸುವುದು ಎಂಬುದರ ಕುರಿತು ಇಲ್ಲಿ ಚರ್ಚೆಗಳು ನಡೆಯುತ್ತವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top