News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2023 ಭರವಸೆ, ಸಂತೋಷ, ಯಶಸ್ಸಿನಿಂದ ತುಂಬಿರಲಿ: ಮೋದಿ ಹಾರೈಕೆ

ನವದೆಹಲಿ: 2023ರ ಆಗಮನವಾಗಿದೆ. ಹೊಸ ಉಲ್ಲಾಸ, ಉತ್ಸಾಹಗಳೊಂದಿಗೆ ಹೊಸ ಕ್ಯಾಲೆಂಡರ್‌ ವರ್ಷವನ್ನು ಜಗತ್ತಿನಾದ್ಯಂತದ ಜನರು ಸ್ವಾಗತಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಕೂಡ ಶುಭ ಹಾರೈಕೆ ನೀಡಿದ್ದು,  2023 ಅದ್ಭುತವಾಗಿರಲಿ. ಹೊಸ ಭರವಸೆ, ಸಂತೋಷ ಮತ್ತು ಯಶಸ್ಸಿನಿಂದ ತುಂಬಿರಲಿ. ಎಲ್ಲರಿಗೂ ಉತ್ತಮ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಹಾರೈಸಿದ್ದಾರೆ.

ನಾನಾ ವಿಧಗಳಲ್ಲಿ 2023ನ್ನು ಸ್ವಾಗತಿಸಲಾಗಿದೆ. ಕೆಲವರು ಬಾರ್‌, ಪಬ್‌ಗಳಲ್ಲಿ ಪಾರ್ಟಿ ಮಾಡಿ ಹೊಸ ಕ್ಯಾಲೆಂಡರ್‌ ವರ್ಷವನ್ನು ಸ್ವಾಗತಿಸಿದರೆ, ಇನ್ನು ಕೆಲವರು ದೇಗುಲಗಳಿಗೆ ಭೇಟಿ ನೀಡುವ ಮೂಲಕ 2023 ಅನ್ನು ಸ್ವಾಗತಿಸುತ್ತಿದ್ದಾರೆ.

ಕಳೆದ ಎರಡು ಹೊಸ ಕ್ಯಾಲೆಂಟರ್ ವರ್ಷಗಳು ಕೋವಿಡ್‌ ಕಾರಣದಿಂದಾಗಿ ಮಂಕಾಗಿದ್ದವು, ಆದರೆ ಈ ಬಾರಿ ಕೋವಿಡ್‌ ನಿರ್ಬಂಧ ಅಷ್ಟೊಂದು ಇರದ ಕಾರಣ ಸಂಭ್ರಮ ಎಲ್ಲೆಡೆ ಮುಗಿಲು ಮುಟ್ಟಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top