News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೇನೆಗಾಗಿ 84,328 ಕೋಟಿ ರೂ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ

ನವದೆಹಲಿ: ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ)ಯು ಸಶಸ್ತ್ರ ಪಡೆಗಳು ಮತ್ತು ಭಾರತೀಯ ಕರಾವಳಿ ಕಾವಲು ಪಡೆಗಳಿಗೆ 84,328 ಕೋಟಿ ರೂಪಾಯಿ ಮೌಲ್ಯದ 24 ಪ್ರಮುಖ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾವನೆಗಳನ್ನು ಅನುಮೋದಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಿನ್ನೆ ನಡೆದ ಡಿಎಸಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಉಪಕ್ರಮವು ಸಶಸ್ತ್ರ ಪಡೆಗಳನ್ನು ಆಧುನೀಕರಿಸುತ್ತದೆ ಮತ್ತು ‘ಆತ್ಮನಿರ್ಭರ ಭಾರತ’ ಗುರಿಯನ್ನು ಸಾಧಿಸುವಲ್ಲಿ ರಕ್ಷಣಾ ಉದ್ಯಮಕ್ಕೆ ಗಣನೀಯ ಉತ್ತೇಜನವನ್ನು ನೀಡುತ್ತದೆ ಎಂದು ನಂಬಲಾಗಿದೆ.

ಈ ಅಗತ್ಯ ಶಸ್ತ್ರಾಸ್ತ್ರಗಳ ಖರೀದಿಯು ಭಾರತೀಯ ಸೇನೆಯನ್ನು ಫ್ಯೂಚರಿಸ್ಟಿಕ್ ಇನ್ಫಾಂಟ್ರಿ ಯುದ್ಧ ವಾಹನಗಳು, ಲೈಟ್ ಟ್ಯಾಂಕ್‌ಗಳು ಮತ್ತು ಮೌಂಟೆಡ್ ಗನ್ ಸಿಸ್ಟಮ್‌ನೊಂದಿಗೆ ಸಜ್ಜುಗೊಳಿಸುತ್ತದೆ, ಇದು ಭಾರತೀಯ ಸೇನೆಯ ಕಾರ್ಯಾಚರಣೆಯ ಸನ್ನದ್ಧತೆಗೆ ಬಲ ತುಂಬಲಿದೆ.

24 ಪ್ರಸ್ತಾವನೆಗಳ ಪೈಕಿ 82 ಸಾವಿರ ಕೋಟಿ ರೂಪಾಯಿಗಳ 21 ಪ್ರಸ್ತಾವನೆಗಳನ್ನು ಸ್ಥಳೀಯ ಮೂಲಗಳಿಂದ ಖರೀದಿಸಲು ಅನುಮೋದನೆ ನೀಡಲಾಗಿದೆ.

ಇವುಗಳಲ್ಲಿ ಭಾರತೀಯ ಸೇನೆಗೆ ಆರು, ಭಾರತೀಯ ವಾಯುಪಡೆಗೆ ಆರು, ಭಾರತೀಯ ನೌಕಾಪಡೆಗೆ 10 ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ಗೆ ಎರಡು ಸೇರಿವೆ. ಅನುಮೋದಿತ ಪ್ರಸ್ತಾವನೆಗಳು ಸೈನಿಕರಿಗೆ ಹೆಚ್ಚಿನ ರಕ್ಷಣೆಯ ಮಟ್ಟವನ್ನು ಹೊಂದಿರುವ ಬ್ಯಾಲಿಸ್ಟಿಕ್ ಹೆಲ್ಮೆಟ್‌ಗಳ ಖರೀದಿಯನ್ನು ಸಹ ಒಳಗೊಂಡಿದೆ. ಹೊಸ ಶ್ರೇಣಿಯ ಕ್ಷಿಪಣಿ ವ್ಯವಸ್ಥೆ ಮತ್ತು ಸುಧಾರಿತ ಕಣ್ಗಾವಲು ವ್ಯವಸ್ಥೆಗಳ ಸೇರ್ಪಡೆ ವರ್ಧಿತ ಸಾಮರ್ಥ್ಯಗಳೊಂದಿಗೆ ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಪಡಿಸಲಿದೆ.

ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ ಮುಂದಿನ ಪೀಳಿಗೆಯ ಕಡಲಾಚೆಯ ಗಸ್ತು ಹಡಗುಗಳ ಖರೀದಿಯು ಕರಾವಳಿ ಪ್ರದೇಶಗಳಲ್ಲಿ ಕಣ್ಗಾವಲು ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ವಿಶ್ಲೇಷಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top