
ಜಮ್ಮು: ಜಮ್ಮುವಿನ ಬಿಜೆಪಿ ಕಾರ್ಯಕರ್ತೆ ಮತ್ತು ಆಭರಣ ವ್ಯಾಪಾರಿ ರಿಂಕು ಚೌಹಾಣ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ಬೆಳ್ಳಿ ಕಮಲವನ್ನು ರಚಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪಕ್ಷದ ಐತಿಹಾಸಿಕ ವಿಜಯವನ್ನು ಸಂಭ್ರಮಿಸುವ ಸಲುವಾಗಿ
ಬಂಗಾಳದಲ್ಲಿ ಕಮಲ ಅರಳಲು 15 ವರ್ಷಗಳಿಂದ ಕಾಯುತ್ತಿದ್ದೆ ಎಂದಿರುವ ರಿಂಕು, ಆ ಕ್ಷಣವನ್ನು ಗೌರವಿಸಲು ರಾತ್ರಿಯಿಡೀ ಕೆಲಸ ಮಾಡಿ ಎರಡು ತಿಂಗಳುಗಳಲ್ಲಿ ಮೂರು ಕಿಲೋ ಬೆಳ್ಳಿಯನ್ನು ಬಳಸಿ ಬಿಜೆಪಿಯ ಪಕ್ಷದ ಚಿಹ್ನೆಯಾದ ಕಮಲವನ್ನು ರೂಪಿಸಿದ್ದಾರೆ.
“ಈ ಬೆಳ್ಳಿ ಕಮಲವು ನನ್ನಂತಹ ಬಿಜೆಪಿ ಕಾರ್ಯಕರ್ತರ ದೃಢತ್ವ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತದೆ” ಎಂದು ಚೌಹಾಣ್ ಹೇಳಿದ್ದಾರೆ.
“ಈ ಗೆಲುವಿನ ಹಿಂದಿನ ಸ್ಫೂರ್ತಿಯಾಗಿರುವ ಪ್ರಧಾನಿ ಮೋದಿಗೆ ನಾವು ವಿಶೇಷವಾದದ್ದನ್ನು ಉಡುಗೊರೆಯಾಗಿ ನೀಡಲು ಬಯಸಿದ್ದೇವೆ. ಪಕ್ಷದ ಚಿಹ್ನೆಗಿಂತ ಉತ್ತಮವಾಗಿ ಏನೂ ಇರಲು ಸಾಧ್ಯವಿಲ್ಲ” ಎಂದು ಚೌಹಾಣ್ ಹೇಳಿದ್ದಾರೆ.
ಅವರ ಪತ್ನಿ ಅಂಜಲಿ ಚೌಹಾಣ್ ಅವರು ಈ ಮೇರುಕೃತಿಯ ಹಿಂದಿನ ಭಕ್ತಿಯನ್ನು ನೆನಪಿಸಿಕೊಂಡಿದ್ದಾರೆ “ಹಲವು ಬಾರಿ ಅವರು ಭೋಜನ ಮಾಡಲು ಮರೆಯುತ್ತಿದ್ದರು. ಅವರು ಈ ಬೆಳ್ಳಿ ಕಮಲವನ್ನು ತಯಾರಿಸುವಲ್ಲಿ ತುಂಬಾ ಮಗ್ನರಾಗಿದ್ದರು” ಎಂದಿದ್ದಾರೆ.
ಸಂಕೀರ್ಣವಾಗಿ ರಚಿಸಲಾದ ಬೆಳ್ಳಿ ಕಮಲ ಇದಾಗಿದ್ದು, ಇದನ್ನು ಸಂಪೂರ್ಣವಾಗಿ ಕೈಯಿಂದ ತಯಾರಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಪಕ್ಷದ ಗಮನಾರ್ಹ ಗೆಲುವಿನ ಜ್ಞಾಪನೆಯಾಗಿ, ಪ್ರಧಾನಿಯವರ ನಿವಾಸ ಅಥವಾ ಬಿಜೆಪಿಯ ದೆಹಲಿ ಪ್ರಧಾನ ಕಚೇರಿಯಲ್ಲಿ ಬೆಳ್ಳಿ ಕಮಲದ ಉಡುಗೊರೆ ನೀಡಿ ಗೌರವ ಸಲ್ಲಿಸಬೇಕೆಂದು ಚೌಹಾಣ್ ಈಗ ಆಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


