News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದಲ್ಲಿ ಸಕ್ರಿಯವಾಗಿವೆ 3,291 ವಿದೇಶಿ ಕಂಪನಿಗಳು

ನವದೆಹಲಿ: ಈ ವರ್ಷದ ಸೆಪ್ಟೆಂಬರ್‌ವರೆಗೆ ಭಾರತದಲ್ಲಿ ತಮ್ಮ ಉದ್ಯಮ ಸ್ಥಳವನ್ನು ನೋಂದಾಯಿಸಿದ 5,068 ವಿದೇಶಿ ಕಂಪನಿಗಳ ಪೈಕಿ 3,291  ಕಂಪನಿಗಳು ಸಕ್ರಿಯವಾಗಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ರಾವ್ ಇಂದರ್‌ಜಿತ್ ಸಿಂಗ್ ಅವರು ಸೋಮವಾರ ಈ ಮಾಹಿತಿ ನೀಡಿದ್ದಾರೆ.  ‘ಕಾರ್ಯಾಚರಣೆಯನ್ನು ನಿಲ್ಲಿಸುವ’ ಮಾಹಿತಿಯನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನಿರ್ವಹಿಸುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ‘ವ್ಯಾಪಾರ ಸ್ಥಳ’ವನ್ನು ನೋಂದಾಯಿಸಿಕೊಳ್ಳಲು ಮತ್ತು ಭಾರತದಲ್ಲಿ ತಮ್ಮ ಉದ್ಯಮವನ್ನು ನಿಲ್ಲಿಸಲು ದೆಹಲಿಯ ರಿಜಿಸ್ಟ್ರಾರ್ ಆಫ್ ಕಂಪನಿಯನ್ನು ಬಳಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

ದೆಹಲಿಯ ರಿಜಿಸ್ಟ್ರಾರ್ ಆಫ್ ಕಂಪನೀಸ್ (ಆರ್‌ಒಸಿ)  ಡೇಟಾವನ್ನು ಉಲ್ಲೇಖಿಸಿದ ಸಿಂಗ್, 2014 ಮತ್ತು ನವೆಂಬರ್ 2021 ರ ನಡುವೆ 877 ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ಉದ್ಯಮವನ್ನು ನಿಲ್ಲಿಸಿವೆ ಎಂದು ಹೇಳಿದರು.

ಫೋರ್ಡ್ ಮತ್ತು ಹಾರ್ಲೆ ಡೇವಿಡ್ಸನ್ ಭಾರತದಲ್ಲಿ ತಮ್ಮ ಉದ್ಯಮ ಸ್ಥಳವನ್ನು ಮುಚ್ಚಿಲ್ಲ ಎಂದು ಅವರು ಹೇಳಿದ್ದಾರೆ.

“ಸೆಪ್ಟೆಂಬರ್ 2022 ರವರೆಗೆ ಭಾರತದಲ್ಲಿ ತಮ್ಮ ವ್ಯಾಪಾರದ ಸ್ಥಳವನ್ನು ನೋಂದಾಯಿಸಿರುವ 5,068 ವಿದೇಶಿ ಕಂಪನಿಗಳಲ್ಲಿ 3,291 ವಿದೇಶಿ ಕಂಪನಿಗಳು ಸಕ್ರಿಯ ಸ್ಥಾನಮಾನವನ್ನು ಹೊಂದಿವೆ” ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಸುಲಲಿತ ವ್ಯಾಪಾರಕ್ಕೆ ಸಂಬಂಧಿಸಿದ ಸೂಚಕಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಹೇಳಿದರು.

“ಸಚಿವಾಲಯವು ನಿರ್ವಹಿಸುವ ಡೇಟಾ ಬೇಸ್ ಪ್ರಕಾರ, 2019-20 ರಲ್ಲಿ 1,22,721 ರಿಂದ 2021-22 ರಲ್ಲಿ 1,67,076 ಗೆ ಮತ್ತು ನವೆಂಬರ್ 2022 ರವರೆಗೆ ಈ ವರ್ಷ 1,15,229 ಗೆ ಸಂಯೋಜಿತ ಕಂಪನಿಗಳ ಸಂಖ್ಯೆ ಹೆಚ್ಚಾಗಿದೆ” ಎಂದು ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top