ಮಂಗಳೂರು : ಸಿಟಿಝೆನ್ಸ್ ಕೌನ್ಸಿಲ್, ಮಂಗಳೂರು ಚಾಪ್ಟರ್ ಇವರ ವತಿಯಿಂದ ಶ್ರೀ ಚಂದ್ರಶೇಖರ ಭಂಡಾರಿಯವರು ಕನ್ನಡಕ್ಕೆ ಅನುವಾದಿಸಿರುವ ರಾಷ್ಟ್ರತಪಸ್ವಿ ಶ್ರೀಗುರೂಜಿ ಗ್ರಂಥ ಬಿಡುಗಡೆ ಸಮಾರಂಭವು, ಡಿಸೆಂಬರ್ 20, ಮಂಗಳವಾರ ಸಂಜೆ 6 ಕ್ಕೆ, ಸಂಘನಿಕೇತನ ಪ್ರತಾಪನಗರ, ಮಣ್ಣಗುಡ್ಡ, ಮಂಗಳೂರಿನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮದ್ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮಂಗಳೂರು ಇವರು ಗ್ರಂಥ ಬಿಡುಗಡೆಯನ್ನು ನೆರವೇರಿಸಿ ಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಸೋಮಣ್ಣ ಹೊಂಗಳ್ಳಿ, ಛೇರ್ಮನ್, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮತ್ತು ನಿರ್ದೇಶಕರು ಪ್ರಸಾರಂಗ, ಮಂಗಳೂರು ವಿಶ್ವವಿದ್ಯಾನಿಲಯ ಇವರು ವಹಿಸಲಿದ್ದಾರೆ. ಶ್ರೀ ಸು. ರಾಮಣ್ಣ, ಜ್ಯೇಷ್ಠ ಪ್ರಚಾರಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ಗ್ರಂಥ ಪರಿಚಯವನ್ನು ನಡೆಸಿಕೊಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.