News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚೀನಾಗೆ ಹಿಂದಿರುಗುವುದಿಲ್ಲ, ಭಾರತ ನನ್ನ ಆದ್ಯತೆಯ ತಾಣ: ದಲೈ ಲಾಮಾ

ನವದೆಹಲಿ: ಚೀನಾಗೆ ಹಿಂದಿರುಗುವುದರಲ್ಲಿ ಅರ್ಥವಿಲ್ಲ, ಭಾರತದಲ್ಲೇ ಇರುತ್ತೇನೆ ಎಂದು ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ ಅವರು ಹೇಳಿದ್ದಾರೆ.

ಇಂದು ಹಿಮಾಚಲದ ಕಂಗ್ರಾದಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಭಾರತವನ್ನು ಆದ್ಯತೆಯ ತಾಣವಾಗಿ ನೋಡುತ್ತೇನೆ ಮತ್ತು ಇದು ಅತ್ಯುತ್ತಮ ಸ್ಥಳವೂ ಆಗಿದೆ. ಚೀನಾಗೆ ಹಿಂದಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದಿದ್ದಾರೆ.

ಹಿಮಾಚಲದ ಕಂಗ್ರಾ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಆಯ್ಕೆಯಾಗಿತ್ತು ಮತ್ತು ಅದು ಈಗ ನನಗೆ ಶಾಶ್ವತ ನಿವಾಸವಾಗಿದೆ ಎಂದಿದ್ದಾರೆ.

ಚೀನಾದ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಪರಿಸ್ಥಿತಿ ಸುಧಾರಿಸುತ್ತಿದೆ ಮತ್ತು ಅದು ಹೆಚ್ಚು ಹೊಂದಿಕೊಳ್ಳುತ್ತಿದೆ ಎಂದು ಹೇಳಿದರು.

ದಲೈ ಲಾಮಾ ಅವರ ಹೇಳಿಕೆಯು ಡಿಸೆಂಬರ್ 9 ರ ತವಾಂಗ್‌ ಸೆಕ್ಟರ್‌ನಲ್ಲಿ ಭಾರತ-ಚೀನಾ ಘರ್ಷಣೆಯ ಹಿನ್ನೆಲೆಯಲ್ಲಿ ಬಂದಿದೆ.

ದಲೈ ಲಾಮಾ ದೆಹಲಿಯಲ್ಲಿ 2-3 ದಿನಗಳ ಕಾಲ ಇರಲು ನಿರ್ಧರಿಸಿದ್ದು, ನಂತರ ಅವರು ಆಧ್ಯಾತ್ಮಿಕ ಬೋಧನೆಗಳು ಮತ್ತು ಇತರ ಕಾರ್ಯಕ್ರಮಗಳಿಗಾಗಿ ಬಿಹಾರದ ಬೋಧಗಯಾಕ್ಕೆ ತೆರಳಲಿದ್ದಾರೆ. ದೆಹಲಿಯಲ್ಲಿ ಕೆಲವು ಸಭೆಗಳು ಮತ್ತು ಕಾರ್ಯಕ್ರಮಗಳನ್ನು ಹೊರತುಪಡಿಸಿ, ದೆಹಲಿಯಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ ಎನ್ನಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top