News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಫಿಫಾ ಚಾಂಪಿಯನ್‌ ಅರ್ಜೆಂಟೀನಾ ತಂಡಕ್ಕೆ ಮೋದಿ ಅಭಿನಂದನೆ

ನವದೆಹಲಿ: ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಅರ್ಜೆಂಟೀನಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

 ಅರ್ಜೇಂಟೀನಾ ಟೂರ್ನಿಯಲ್ಲಿ ಅದ್ಭುತವಾಗಿ ಆಡಿದೆ. ಇದು ಅತ್ಯಂತ ರೋಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ. ಅರ್ಜೆಂಟೀನಾ ಮತ್ತು ಲಿಯೋನೆಲ್ ಮೆಸ್ಸಿ ಅವರ ಲಕ್ಷಾಂತರ ಭಾರತೀಯ ಅಭಿಮಾನಿಗಳು ಈ ಅಮೋಘ ವಿಜಯಕ್ಕೆ ಸಂತೋಷಪಡುತ್ತಾರೆ ಎಂದು  ಮೋದಿ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಉತ್ಸಾಹಭರಿತ ಪ್ರದರ್ಶನ ನೀಡಿ ಸೋಲು ಕಂಡ ಫ್ರಾನ್ಸ್ ಅನ್ನು ಕೂಟ ಪ್ರಧಾನಿ ಅಭಿನಂದಿಸಿದರು. ಫ್ರಾನ್ಸ್‌ ತಂಡ ಫೈನಲ್‌ ಹಾದಿಯಲ್ಲಿ ತಮ್ಮ ಕೌಶಲ್ಯ ಮತ್ತು ಕ್ರೀಡಾ ಮನೋಭಾವದಿಂದ ಫುಟ್‌ಬಾಲ್ ಅಭಿಮಾನಿಗಳನ್ನು ಸಂತೋಷಪಡಿಸಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಕೂಟ ಫಿಫಾ ವಿಶ್ವಕಪ್ ಎತ್ತಿಹಿಡಿದ ಅರ್ಜೆಂಟೀನಾ ತಂಡವನ್ನು ಅಭಿನಂದಿಸಿದ್ದಾರೆ. ಗೆಲುವಿನ ಸನಿಹ ಬಂದು ಹತ್ತಿರ ಬಂದು ಅರ್ಹ ರನ್ನರ್ಸ್-ಅಪ್ ಆದ ತಂಡ ಫ್ರಾನ್ಸ್‌ ತಂಡದ ಬಗ್ಗೆ  ಗೌರವವಿದೆ ಅವರು ಹೇಳಿದರು. ಎರಡೂ ತಂಡಗಳು ಇಡೀ ಜಗತ್ತಿಗೆ ಪ್ರದರ್ಶನ ನೀಡಿವೆ ಮತ್ತು ತಮ್ಮ ಅಮೋಘ ಪ್ರದರ್ಶನದಿಂದ ಎಲ್ಲರನ್ನೂ ರಂಜಿಸಿವೆ ಎಂದು ಸಚಿವರು ಹೇಳಿದರು.

ಕತಾರ್ ಲುಸೇಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫಿಫಾ ಫೈನಲ್ ಪಂದ್ಯ ಹಾಲಿ ಫ್ರಾನ್ಸ್ ವಿರುದ್ಧ ಅರ್ಜೆನಾ ರೋಚಕ ಗೆಲುವು ದಾಖಲಿಸಿದ್ದು, ಈ ಮೂಲಕ ಅರ್ಜೆಂಟೀನಾ 36 ನಂತರ ಮೂರನೇ ಬಾರಿಗೆ ಫಿಫಾ ಪದವಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top