ಬೆಳ್ತಂಗಡಿ : ತಾನು ಎಷ್ಟೇ ಮೆಲಕ್ಕೇರಿದರೂ ತನ್ನನ್ನು ಎತ್ತರಕ್ಕೇರಿಸದವರನ್ನು ಮರೆಯಬಾರದು ಎಂಬುದನ್ನು ಗೋವಿಂದ ಸ್ಪರ್ಧೆ ನೆನಪಿಸಿಕೊಡುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಹೇಳಿದರು.ಅವರು ಆದಿತ್ಯವಾರ ಬೆಳ್ತಂಗಡಿ ಬಸ್ನಿಲ್ದಾಣದ ಬಳಿ ಶ್ರೀಕೃಷ್ಣೋತ್ಸವ ಸೇವಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಡೆಯುವ ಕೃಷ್ಣೋತ್ಸವ-2015ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಕೃತಿಯೊಂದಿಗೆ ಬಾಳಿ ಬದುಕು ಸಾಗಿಸುವ ಎಂಬುದು ಹಿರಿಯರ ಆಶಯ. ಸಹಬಾಳ್ವೆಯ ಸಂದೇಶವನ್ನು ಗೋವಿಂದ ಸ್ಪರ್ಧೆ ನೆನಪಿಸಿಕೊಡುತ್ತದೆ. ಯಾವುದೇ ಕಾರ್ಯ ಧರ್ಮದ ಚೌಕಟ್ಟಿನಲ್ಲಿ ನಡೆದರೆ ಅದು ಸಾರ್ಥಕತೆಯನ್ನು ಕಾಣುತ್ತದೆ. ಭಗವಾನ್ ಶ್ರೀಕೃಷ್ಣ ಬಾಲಕರಿಂದ ವಯೋವೃದ್ಧರವರೆಗೆ ಪ್ರಿಯವಾದವನು. ಅಹಂಕಾರ, ಸ್ವಾರ್ಥರಹಿತ ಜೀವನ ನಮ್ಮದಾಗಬೇಕು ಎಂದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಉತ್ಸವವನ್ನು ಉದ್ಘಾಟಿಸಿ, ಹಿಂದೂ ಸಂಸ್ಕೃತಿಯನ್ನು ಬೆಳಗಿಸುವುದಕ್ಕೆ ಕೃಷ್ಣೋತ್ಸವವೂ ಪೂರಕ. ಇಂದು ಬೆಳ್ತಂಗಡಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕೃಷ್ಣನ ಬಾಲ್ಯ ಲೀಲೆಗಳನ್ನು ನೆನಪಿಸುವ ಕೆಲಸ ಈ ಉತ್ಸವದಿಂದ ಆಗುತ್ತದೆ. ಅಬಾಲವೃದ್ದರಾದಿಯಾಗಿ ಈ ಉತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸುತ್ತಾರೆ. ಸಮಿತಿ ಅತ್ಯಂತ ಅಭಿನಂದನೀಯ ಕೆಲಸ ಮಾಡಿದೆ ಎಂದರು.
ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು, ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ ಶುಭ ಹಾರೈಸಿದರು.
ಸಮಿತಿ ಗೌರವಾಧ್ಯಕ್ಷ ಹರೀಶ್ ಪೂಂಜ ಪ್ರಾಸ್ತಾವಿಸಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಘಟನೆಯನ್ನು ಮಾಡುವಲ್ಲಿ ಸಮಿತಿಯನ್ನು ರಚಿಸಲಾಗಿದೆ. ಇದರ ಮೊದಲ ಪ್ರಯತ್ನವಾಗಿ ಗೋವಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ತಾಲೂಕಿನ ಎಲ್ಲಾ ಹಿರಿ-ಕಿರಿಯ ಸ್ನೇಹಿತರು ಸಹಕಾರ ನೀಡಿ ಕಾಂiಕ್ರಮ ಯಶಸ್ವಿಯಾಗಲು ಸಹಕರಿಸಿದ್ದಾರೆ ಎಂದರು.ಪಟ್ಟಣ ಪಂ.ಅಧ್ಯಕ್ಷೆ ನಳಿನಿ ವಿಶ್ವನಾಥ್, ಸಮಿತಿ ಕಾರ್ಯದರ್ಶಿ ಉಮೇಶ್ ಕುಲಾಲ್, ಕೋಶಾಧಿಕಾರಿ ಶರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯ ಕಲಾ ಮೆರವಣಿಗೆಯೊಂದಿಗೆ ತಾಲೂಕು ಹಾಗೂ ಜಿಲ್ಲೆಯ ಅಹ್ವಾನಿತ 10 ತಂಡಗಳಿಂದ ಹತ್ತು ಕಡೆಗಳಲ್ಲಿ ಗೋವಿಂದ ಸ್ಪರ್ಧೆ ನಡೆಯಿತು. ಅಂತಿಮ ಸ್ಪರ್ಧೆಯು ಮಂಜುನಾಥ ಕಲಾಭವನದ ಮುಂಭಾಗದ ಮೈದಾನದಲ್ಲಿ ನಡೆಯಿತು. ನಗರದ 6 ವರ್ಷದ ಕೆಳಗಿನ ಶಾಲಾ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು. ನೂರಾರು ಪುಟಾಣಿಗಳು ಕೃಷ್ಣ ವೇಷಧಾರಿಗಳಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಥಮ ಬಾರಿಗೆ ಬೆಳ್ತಂಗಡಿ ನಡೆಯುತ್ತಿರುವ ಗೋವಿಂದ ಸ್ಪರ್ಧೆಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.
ಸಮಿತಿ ಅಧ್ಯಕ್ಷ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ವಿಜಯ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿ, ಸಂಯೋಜಕ ಜಗದೀಶ್ ಕನ್ನಾಜೆ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.