News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೂ ಖಾತೆಯನ್ನು ಸ್ಥಗಿತಗೊಳಿಸಿದ ಟ್ವಿಟರ್

ನವದೆಹಲಿ:  ಟ್ವಿಟರ್ ಭಾರತೀಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಖಾತೆಯನ್ನು ಸ್ಥಗಿತಗೊಳಿಸಿದೆ. ಕೂ ಟ್ವಿಟರ್ ಹ್ಯಾಂಡಲ್ @kooeminence ಅನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ.

ಬಿಲಿಯನೇರ್ ಎಲೋನ್ ಮಸ್ಕ್ ಒಡೆತನದ ಟ್ವಿಟರ್ ನ್ಯೂಯಾರ್ಕ್ ಟೈಮ್ಸ್, ಸಿಎನ್‌ಎನ್ ಮತ್ತು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಹಲವಾರು ಪ್ರಮುಖ ಜಾಗತಿಕ ಪತ್ರಕರ್ತರ ಖಾತೆಗಳನ್ನು ಅಮಾನತುಗೊಳಿಸಿದ ಬೆಳವಣಿಗೆಯ ನಡುವೆಯೇ ಕೂ ಖಾತೆಯನ್ನೂ ನಿಷೇಧಿಸಲಾಗಿದೆ.

ಕೂ ಎಮಿನೆನ್ಸ್ ಅಮಾನತುಗೊಂಡ ಹ್ಯಾಂಡಲ್ ಆಗಿದ್ದು, ಅದನ್ನು ಕೆಲವೇ ದಿನಗಳ ಹಿಂದೆ ಸ್ಥಾಪಿಸಲಾಯಿತು.

“ಟ್ವಿಟ್ಟರ್‌ನಲ್ಲಿ ಕೂ ಹ್ಯಾಂಡಲ್‌ಗಳಲ್ಲಿ ಒಂದನ್ನು ಇದೀಗ ನಿಷೇಧಿಸಲಾಗಿದೆ. ಯಾವುದಕ್ಕಾಗಿ?  ನಾವು ಟ್ವಿಟರ್‌ನೊಂದಿಗೆ ಸ್ಪರ್ಧಿಸುತ್ತೇವೆಯೇ ಆದ್ದರಿಂದಲೇ? ಮಾಸ್ಟೋಡಾನ್ ಅನ್ನು ಕೂಡ ಇಂದು ನಿರ್ಬಂಧಿಸಲಾಗಿದೆ. ಇದು ವಾಕ್ ಸ್ವಾತಂತ್ರ್ಯ ಹೇಗೆ ಮತ್ತು ನಾವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ?” ಎಂದು ಕೂ ಸಿಇಒ ಆಗಿರುವ ಅಪ್ರಮೇಯ ರಾಧಾಕೃಷ್ಣ ಟ್ವೀಟ್ ಮಾಡಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ, ಕೂ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕಾ ಅವರು ಕೂಡ ‘ಮಸ್ಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top