News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವಸಂಸ್ಥೆಯ ಮಹಿಳಾ ಹಕ್ಕುಗಳ ಸಂಸ್ಥೆಯಿಂದ ಇರಾನ್‌ಗೆ ನಿಷೇಧ

ನವದೆಹಲಿ: ಮಹಿಳೆಯರ ಹಕ್ಕುಗಳಿಗೆ ವಿರುದ್ಧವಾದ ನೀತಿಗಳನ್ನು ಹೊಂದಿರುವ ಇರಾನ್ ಅನ್ನು ವಿಶ್ವಸಂಸ್ಥೆಯ ಮಹಿಳಾ ಹಕ್ಕುಗಳ ಸಂಸ್ಥೆಯು ನಿಷೇಧಕ್ಕೊಳಪಡಿಸಿದೆ.

54 ಸದಸ್ಯ ಯುಎನ್ ಎಕನಾಮಿಕ್ ಆಂಡ್ ಸೋಶಿಯಲ್ ಕೌನ್ಸಿಲ್ (ECOSOC), ಯುಎಸ್ ಕರಡು ನಿರ್ಣಯವನ್ನು ಅಳವಡಿಸಿಕೊಂಡು “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್’ ಅನ್ನು ಕಮಿಷನ್ ಆನ್ ಸ್ಟೇಟ್ಸ್ ಆಫ್ ವುಮೆನ್ (CSW)ನಿಂದ ತಕ್ಷಣದಿಂದ ಜಾರಿಗೆ‌ ಬರುವಂತೆ ತೆಗೆದುಹಾಕಿದೆ.

ನಿರ್ಣಯವು 29 ಮತಗಳಿಂದ ಬೆಂಬಲಿತಗೊಂಡಿದೆ, ನಿರ್ಣಯದ ವಿರುದ್ಧ ರಷ್ಯಾ ಮತ್ತು ಚೀನಾ ಸೇರಿದಂತೆ ಎಂಟು ದೇಶಗಳು ಇವೆ. ಭಾರತ ಸೇರಿದಂತೆ 16 ರಾಷ್ಟ್ರಗಳು ತಟಸ್ಥ ನಿಲುವು ತಳೆದಿದೆ.

ನಿರ್ಣಯವು, “ಇರಾನ್ ಹೆಣ್ಣುಮಕ್ಕಳ ಮಾನವ ಹಕ್ಕುಗಳನ್ನು ನಿರಂತರವಾಗಿ ದುರ್ಬಲಗೊಳಿಸುತ್ತಿದೆ ಮತ್ತು ಹ ನಿಗ್ರಹಿಸುತ್ತಿದೆ. ಮಹಿಳೆಯರ ಮಾನವ ಹಕ್ಕುಗಳಿಗೆ ವಿರುದ್ಧವಾದ ನೀತಿಗಳನ್ನು ಸ್ಪಷ್ಟವಾಗಿ ಹೊಂದಿದೆ” ಎಂದು ಹೇಳಿದೆ.

ವಿಶ್ವಸಂಸ್ಥೆಯ ಯುಎಸ್ ರಾಯಭಾರಿ ಲಿಂಡಾ-ಥಾಮಸ್ ಗ್ರೀನ್‌ಫೀಲ್ಡ್ ಅವರು ಈ ಬಗ್ಗೆ  ಮಾತನಾಡಿ, ಇರಾನ್ ಅನ್ನು ತೆಗೆದುಹಾಕುವುದು ಇಲ್ಲಿ ಸರಿಯಾದ ಕೆಲಸ ಮತ್ತು ಅದರ ಸದಸ್ಯತ್ವವು ಸಂಸ್ಥೆಯನ್ನು ಒಳಗಿನಿಂದ ದುರ್ಬಲಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕವಾಗಿ ಹಿಜಾಬ್  ಧರಿಸದ ಆರೋಪದ ಮೇಲೆ 22 ವರ್ಷದ ಮಹಿಳೆ ಮಹಾಸಾ ಅಮಿನಿ ಸಾವಿನ ಕುರಿತು ಇಸ್ಲಾಮಿಕ್ ರಾಷ್ಟ್ರದಲ್ಲಿ ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಕ್ರಮವು ಬಂದಿದೆ.  ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆಕೆಯನ್ನು ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top