News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

15.4 ಲಕ್ಷ ಮೇಡ್‌ ಇನ್‌ ಇಂಡಿಯಾ ಚಕ್ರಗಳನ್ನು ಖರೀದಿಸಲಿದೆ ರೈಲ್ವೆ

ನವದೆಹಲಿ: ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ದೊಡ್ಡ ಉತ್ತೇಜನವೆಂಬಂತೆ ಭಾರತೀಯ ರೈಲ್ವೇಯು ದೇಶೀಯವಾಗಿ ರೈಲು ಚಕ್ರಗಳನ್ನು ತಯಾರಿಸುವ ಮೂಲಕ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ಯೋಜಿಸಿದೆ.

ಭಾರತದಲ್ಲಿ ಸುಮಾರು 15,40,000 ಚಕ್ರಗಳನ್ನು ತಯಾರಿಸಲು ಮತ್ತು ಸರಬರಾಜು ಮಾಡಲು ಬಿಡ್‌ಗಳನ್ನು ಆಹ್ವಾನಿಸಲು ಟೆಂಡರ್ ಅನ್ನು ನೀಡಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

ವಿವಿಧ ರೋಲಿಂಗ್ ಸ್ಟಾಕ್‌ನ ಚಕ್ರಗಳನ್ನು 20 ವರ್ಷಗಳ ಅವಧಿಯಲ್ಲಿ ರೈಲ್ವೆಗೆ ಸರಬರಾಜು ಮಾಡಲಾಗುವುದು ಮತ್ತು 60% ಕ್ಕಿಂತ ಹೆಚ್ಚು ಸ್ಥಳೀಯತೆ ಹೊಂದಿರುವ ಪೂರೈಕೆದಾರರು ಟೆಂಡರ್‌ ಪಡೆಯಲು ಅರ್ಹರಾಗಿರುತ್ತಾರೆ. ಟೆಂಡರ್ ಅನ್ನು 24 ಜನವರಿ 2023 ರಂದು ತೆರೆಯಲಾಗುವುದು ಎಂದಿದ್ದಾರೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಭಾರತೀಯ ರೈಲ್ವೇಯು ರೂ 1,000 ಕೋಟಿ ಮೌಲ್ಯದ ಟೆಂಡರ್ ಅನ್ನು ಕರೆದಿತ್ತು, ಸೆಮಿ-ಹೈ ಸ್ಪೀಡ್ ಮತ್ತು ಹೈ-ಸ್ಪೀಡ್ ರೈಲುಗಳಿಗೆ  ಚಕ್ರಗಳನ್ನು ತಯಾರಿಸಲು ದೇಶದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಆಸಕ್ತರನ್ನು ಆಹ್ವಾನಿಸಿತ್ತು.

ಪ್ರಸ್ತಾವಿತ ಸೌಲಭ್ಯದಿಂದ ವರ್ಷಕ್ಕೆ 600 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 80,000 ಫೋರ್ಜ್ಡ್ ರೈಲು ಚಕ್ರಗಳನ್ನು ರೈಲ್ವೇ ಖರೀದಿಸಲಿದೆ.

ಭಾರತೀಯರಿಗೆ ಮಾತ್ರ ಟೆಂಡರ್ ಮುಕ್ತವಾಗಿದೆ, ರೈಲ್ವೆಗೆ ಉತ್ಪನ್ನಗಳನ್ನು ಪೂರೈಸಿದ ನಂತರ  ಚಕ್ರಗಳನ್ನು ಯುರೋಪ್ ಮತ್ತು ಇತರ ದೇಶಗಳಿಗೆ ರಫ್ತು ಮಾಡಲು ಅನುಮತಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇಲ್ಲಿಯವರೆಗೆ, ಭಾರತೀಯ ರೈಲ್ವೇ ತನ್ನ ಅಗತ್ಯಗಳಿಗಾಗಿ ಚಕ್ರಗಳನ್ನು ಆಮದು ಮಾಡಿಕೊಳ್ಳಲು ಯುರೋಪ್ ಅನ್ನು ಹೆಚ್ಚಾಗಿ ಅವಲಂಬಿಸಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top