News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತಮಿಳುನಾಡು ಸಿಎಂ ಪತ್ನಿಗೆ ದೇವರ ಕೊಡೆ ಹಿಡಿದ ದೇಗುಲ ಸಿಬ್ಬಂದಿ: ಭಾರೀ ವಿರೋಧ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರನ್ನು ದೇವಸ್ಥಾನದ ಸಿಬ್ಬಂದಿಗಳು ದೇವರಿಗೆ ಮೀಸಲಿಟ್ಟ ಛತ್ರಿ ಬಳಸಿ ಮಳೆಯಿಂದ ರಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ದುರ್ಗಾ ಸ್ಟಾಲಿನ್ ಅವರು ಚೆನ್ನೈನ ತಿರೊವೊಟ್ಟಿಯೂರಿನಲ್ಲಿರುವ ತ್ಯಾಗರಾಜಸ್ವಾಮಿ ದೇವಸ್ಥಾನದಿಂದ ಹೊರಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ದುರ್ಗಾ ಸ್ಟಾಲಿನ್ ದೇವರ ಛತ್ರಿಯೊಂದಿಗೆ ನಡೆಯುತ್ತಿದ್ದರೆ, ದೇವರ ಮೂರ್ತಿಗೆ ಸಾಮಾನ್ಯ ಕಪ್ಪು ಛತ್ರಿಯಿಂದ ರಕ್ಷಣೆ ನೀಡಲಾಗಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿದ್ದು, ವಿಐಪಿ ಸಂಸ್ಕೃತಿಯನ್ನು ಹಲವಾರು ಮಂದಿ ಟೀಕಿಸಿದ್ದಾರೆ. ದೇವಸ್ಥಾನಗಳ ಮೇಲೆ ಸರ್ಕಾರದ ನಿಯಂತ್ರಣವೇ ಇದಕ್ಕೆ ಕಾರಣ ಎಂದೂ ಕೆಲವು ಬಳಕೆದಾರರು ಹೇಳಿದ್ದಾರೆ.

ತ್ಯಾಗರಾಜಸ್ವಾಮಿ ದೇವಾಲಯವನ್ನು ಪಲ್ಲವರು ಏಳನೇ ಶತಮಾನದಲ್ಲಿ ನಿರ್ಮಿಸಿದರು ಮತ್ತು ನಂತರ ಚೋಳರಿಂದ ಇದು ವಿಸ್ತರಿಸಲ್ಪಟ್ಟಿತು. ಇದು ಪ್ರಸ್ತುತ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆಯ ನಿಯಂತ್ರಣದಲ್ಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top