News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಳೆದ 3 ವಿತ್ತ ವರ್ಷಗಳಲ್ಲಿ 9.98 ಲಕ್ಷ ಕೋಟಿ ರೂ ಮುದ್ರಾ ಸಾಲ ವಿತರಣೆ

ನವದೆಹಲಿ: ಮಾರ್ಚ್ 2022 ಕ್ಕೆ ಕೊನೆಗೊಂಡ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 9.98 ಲಕ್ಷ ಕೋಟಿ ರೂಪಾಯಿಗಳ  ಮೊತ್ತವನ್ನು ಒಳಗೊಂಡ 16.67 ಕೋಟಿ ಸಾಲಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಒಟ್ಟು ಸಾಲಗಳ ಪೈಕಿ 11.08 ಕೋಟಿಗೂ ಹೆಚ್ಚು ಸಾಲಗಳನ್ನು ಮಹಿಳಾ ಸಾಲಗಾರರಿಗೆ ವಿಸ್ತರಿಸಲಾಗಿದೆ. ಇದರ ಮೊತ್ತ 4.42 ಲಕ್ಷ ಕೋಟಿ ರೂಪಾಯಿಗಳು. ಇದು ಒಟ್ಟು ಸಾಲಗಳ ಸಂಖ್ಯೆಯಲ್ಲಿ ಸರಿಸುಮಾರು 68% ಮತ್ತು ಯೋಜನೆಯ ಅಡಿಯಲ್ಲಿ ವಿತರಿಸಲಾದ ಮೊತ್ತದ 44% ರಷ್ಟು ಎಂದು ಸೀತಾರಾಮನ್ ಹೇಳಿದ್ದಾರೆ.

ಕಳೆದ ವರ್ಷಗಳಲ್ಲಿ ಯೋಜನೆಯಡಿಯಲ್ಲಿ ವಿವಿಧ ಕೈಗಾರಿಕೆಗಳಿಗೆ ಮಂಜೂರಾದ  ಸಾಲ, ಮಹಿಳಾ ಫಲಾನುಭವಿಗಳ ಸಂಖ್ಯೆ ಮತ್ತು ಜಾಗೃತಿ ಮೂಡಿಸಲು ಕೈಗೊಂಡ ಕ್ರಮಗಳ ಕುರಿತು ಸಂಸದ ಸೆಲ್ವರಾಜ್ ಅವರ ಪ್ರಶ್ನೆಗೆ ಉತ್ತರವಾಗಿ ಅವರು ಈ ಮಾಹಿತಿ ನೀಡಿದ್ದಾರೆ.

ಕೇಂದ್ರವು ದೇಶದಾದ್ಯಂತ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ, ಇದರಲ್ಲಿ ಮಾಧ್ಯಮ ಪ್ರಚಾರ, ಆರ್ಥಿಕ ಸಾಕ್ಷರತೆ ಮತ್ತು ಜಾಗೃತಿ ಶಿಬಿರಗಳು, ಹಣಕಾಸು ಸೇರ್ಪಡೆಗಾಗಿ ವಿಶೇಷ ಡ್ರೈವ್ ಮತ್ತು ಇತರ ವಿಧಾನಗಳು ಸೇರಿವೆ ಎಂದಿದ್ದಾರೆ.

ಬ್ಯಾಂಕುಗಳು ತಮ್ಮ ಶಾಖೆಗಳ ಮೂಲಕ ಮತ್ತು ಬ್ಯಾಂಕಿಂಗ್ ವರದಿಗಾರರ ಮೂಲಕ ಸಾರ್ವಜನಿಕರ ಬೀಲ ಯೋಜನೆಯನ್ನು ತಲುಪಿಸಿವೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top