News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೆಪೊ ದರವನ್ನು ಶೇ.6.25 ಕ್ಕೆ ಏರಿಸಿದ ಆರ್‌ಬಿಐ

ನವದೆಹಲಿ: ಬಡ್ಡಿದರಗಳನ್ನು ನಿರ್ಧರಿಸುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಾಲಿಸಿ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಶೇಕಡಾ 6.25 ಕ್ಕೆ ಏರಿಸಿದೆ.

ಡಿಸೆಂಬರ್ 7 ರಂದು ಮುಕ್ತಾಯಗೊಂಡ ಮೂರು ದಿನಗಳ ಸುದೀರ್ಘ ಹಣಕಾಸು ನೀತಿ ಸಮಿತಿ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಸಭೆಯಲ್ಲಿ ಹಣಕಾಸು ನೀತಿ ಸಮಿತಿಯ ಆರು ಸದಸ್ಯರಲ್ಲಿ ಐವರು ದರವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು.

ರೆಪೋ ದರವನ್ನು  6.25ಕ್ಕೆ ಏರಿಸಿದ ಕಾರಣ ಗೃಹ, ವಾಹನ, ವಾಣಿಜ್ಯ ಸಾಲದ ಬಡ್ಡಿ ದರ ದುಬಾರಿ ಆಗಲಿವೆ. ಕಳೆದ ಮೂರು ಹಣಕಾಸು ನೀತಿ ಬಡ್ಡಿದರ ಏರಿಕೆ ಪ್ರಮಾಣ ಕ್ರಮವಾಗಿ.0.50 ರಷ್ಟಿತ್ತು. ಪ್ರಸಕ್ತ ಹಣದುಬ್ಬರ ಅಲ್ಪ ಇಳಿಕೆಯಾಗಿದ್ದರೂ, ಶೇ.6ಕ್ಕಿಂತ ಮೇಲೇ ಇರುವ ಕಾರಣ, ಬಡ್ಡಿದರ ಏರಿಕೆಯಾಗಿದೆ.

ರೆಪೋ ದರ ಎಂದರೆ ಆರ್ ಬಿಐ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top