News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡ್ರೋನ್ ಇ ಲರ್ನಿಂಗ್ ವೇದಿಕೆ ಉದ್ಘಾಟಿಸಿದ ಅನುರಾಗ್‌ ಠಾಕೂರ್

ಚೆನ್ನೈ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಇಂದು ಚೆನ್ನೈ ಬಳಿಯ ಚೆಂಗಲ್‌ಪೇಟ್‌ನಲ್ಲಿರುವ ಅಗ್ನಿ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ವರ್ಚುವಲ್ ಡ್ರೋನ್ ಇ ಕಲಿಕಾ ವೇದಿಕೆಯನ್ನು ಉದ್ಘಾಟಿಸಿದರು. ಅಲ್ಲದೇ ಸಚಿವರು ಡ್ರೋನ್ ಯಾತ್ರೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕೂರ್, ಡ್ರೋನ್ ತಂತ್ರಜ್ಞಾನವು ರಕ್ಷಣೆ, ಕೃಷಿ, ತೋಟಗಾರಿಕೆ, ಸಿನಿಮಾ ಕ್ಷೇತ್ರಗಳಿಗೆ ಅತ್ಯಗತ್ಯವಾಗಿದ್ದು, ಹಲವು ಕ್ಷೇತ್ರಗಳಿಗೆ ಪರ್ಯಾಯವಾಗಬಲ್ಲದು ಎಂದರು.

ಚೆಂಗಲ್‌ಪೇಟೆ ಜಿಲ್ಲೆಯ ಗರುಡ ಏರೋಸ್ಪೇಸ್ ಟೆಕ್ನಾಲಜಿಯಿಂದ ಎರಡು ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಕನಿಷ್ಠ ಒಂದು ಲಕ್ಷ ಡ್ರೋನ್ ಪೈಲಟ್‌ಗಳನ್ನು ತಯಾರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಡ್ರೋನ್ ತಂತ್ರಜ್ಞಾನದಲ್ಲಿ ಅತ್ಯಾಧುನಿಕ ಅಭಿವೃದ್ಧಿಯಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎಂದ ಅವರು, ಅಕ್ರಮ ಗಣಿಗಾರಿಕೆಯನ್ನು ತಡೆಯಲು ಡ್ರೋನ್ ತಂತ್ರಜ್ಞಾನವನ್ನು ಬಳಸಬಹುದು ಮತ್ತು ಕೃಷಿಯ ಮೇಲೆ ಭಾರಿ ಪರಿಣಾಮ ಬೀರಬಹುದು ಎಂದು  ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top