ಬೆಂಗಳೂರು: ಇಸ್ರೋದ ಬಹುಮುಖಿ ಸೌಂಡಿಂಗ್ ರಾಕೆಟ್ RH200 ಅನ್ನು ತಿರುವನಂತಪುರಂನ ತುಂಬ ತೀರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಸತತ 200 ನೇ ಯಶಸ್ವಿ ಉಡಾವಣೆಯನ್ನು ಈ ರಾಕೆಟ್ ನೋಂದಾಯಿಸಿದೆ.
ಇಸ್ರೋ ಬುಧವಾರ ಇದನ್ನು ‘ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದೆ. ಇದಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಇತರರು ಸಾಕ್ಷಿಯಾದರು.
RH200 ರ ಯಶಸ್ವಿ ಹಾರಾಟವು ತುಂಬ ಈಕ್ವಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರದಿಂದ (TERLS) ಹಾರಾಟ ನಡೆಸಿತು.
ಭಾರತೀಯ ಸೌಂಡಿಂಗ್ ರಾಕೆಟ್ಗಳನ್ನು ಪವನಶಾಸ್ತ್ರ, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಮೇಲೆ ಪ್ರಯೋಗಗಳನ್ನು ಕೈಗೊಳ್ಳಲು ವೈಜ್ಞಾನಿಕ ಸಮುದಾಯಕ್ಕೆ ವಿಶೇಷ ಸಾಧನಗಳಾಗಿ ಬಳಸಲಾಗುತ್ತದೆ ಎಂದು ಇಸ್ರೋ ಹೇಳಿಕೆ ತಿಳಿಸಿದೆ.
ರೋಹಿಣಿ ಸೌಂಡಿಂಗ್ ರಾಕೆಟ್ (ಆರ್ಎಸ್ಆರ್) ಸರಣಿಯು ಇಸ್ರೋದ ಭಾರವಾದ ಮತ್ತು ಹೆಚ್ಚು ಸಂಕೀರ್ಣವಾದ ಉಡಾವಣಾ ವಾಹನಗಳ ಪೈಕಿ ಮುಂಚೂಣಿಯಲ್ಲಿದೆ, ವಾತಾವರಣ ಮತ್ತು ಹವಾಮಾನ ಅಧ್ಯಯನಗಳಿಗೆ ಇಂದಿಗೂ ನಿರಂತರ ಬಳಕೆಯಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.
‘ಸತತ 200ನೇ ಯಶಸ್ವಿ ಹಾರಾಟವು ಭಾರತೀಯ ರಾಕೆಟ್ ವಿಜ್ಞಾನಿಗಳ ಬದ್ಧತೆಗೆ ಸಾಟಿಯಿಲ್ಲದ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆʼ ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.