ನವದೆಹಲಿ: 2022-23ರಲ್ಲಿ ರಾಷ್ಟ್ರೀಯ ನಗದೀಕರಣ ಪೈಪ್ಲೈನ್ (ಎನ್ಎಂಪಿ) ಅಡಿಯಲ್ಲಿ ಸರ್ಕಾರವು 33,422 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ನಗದೀಕರಿಸಿದೆ. ಕಲ್ಲಿದ್ದಲು ಸಚಿವಾಲಯವು ರೂ 17,000 ಕೋಟಿ ಗಳಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬಂದರು ಮತ್ತು ಹಡಗು ಸಚಿವಾಲಯವು ತನ್ನ ಒಟ್ಟಾರೆ ಹಣಕಾಸು ವರ್ಷದ ಗುರಿ ಮೀರಿಸಿದೆ.
ಮೂಲಗಳ ಪ್ರಕಾರ, 2021-22ರಲ್ಲಿ 1 ಲಕ್ಷ ಕೋಟಿ ಮೌಲ್ಯದ ವಹಿವಾಟುಗಳನ್ನು ಪೂರ್ಣಗೊಳಿಸುವ ಮೂಲಕ ಸರ್ಕಾರವು ಎನ್ಎಂಪಿಯ ಮೊದಲ ವರ್ಷದ ಗುರಿಯಾದ 88,000 ಕೋಟಿ ರೂಪಾಯಿಯನ್ನು ಮೀರಿಸಿದೆ.
ಸರ್ಕಾರದ ಇತ್ತೀಚಿನ ಅಂದಾಜಿನ ಪ್ರಕಾರ, 2022-23ರಲ್ಲಿ ಒಟ್ಟಾರೆ ರೂ 1,62,422 ಕೋಟಿ ಆಸ್ತಿ ನಗದೀಕರಣದ ಗುರಿಯನ್ನು ಸಾಧಿಸುವಲ್ಲಿ ರೂ 38,243 ಕೋಟಿ ಕೊರತೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
“ಪ್ರಸಕ್ತ ಹಣಕಾಸು ವರ್ಷದಲ್ಲಿ ಎನ್ಎಂಪಿ ಅಡಿಯಲ್ಲಿ ಆಸ್ತಿ ನಗದೀಕರಣದಿಂದ ಗಳಿಕೆ ರೂ 1,24,179 ಕೋಟಿ ಎಂದು ಅಂದಾಜಿಸಲಾಗಿದೆ” ಎಂದು ತಿಳಿಸಿವೆ.
ಮೂಲಗಳ ಪ್ರಕಾರ, ಕಲ್ಲಿದ್ದಲು ಸಚಿವಾಲಯ, ಗಣಿ ಸಚಿವಾಲಯ ಮತ್ತು ಬಂದರು ಮತ್ತು ಹಡಗು ಸಚಿವಾಲಯವು ಆಸ್ತಿ ನಗದೀಕರಣದ ಗುರಿಯನ್ನು ಮೀರುವ ಸಾಧ್ಯತೆಯಿದ್ದರೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ.
ವಿದ್ಯುತ್ ಸಚಿವಾಲಯ, ರೈಲ್ವೆ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ತೈಲ ಮತ್ತು ಅನಿಲ ಸಚಿವಾಲಯ ಗುರಿ ತಪ್ಪುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳು ಹಣಗಳಿಕೆಯ ಆಧಾರದ ಮೇಲೆ ಕೇಂದ್ರೀಕೃತ ರಾಜ್ಯಗಳಾಗಿ ಗುರುತಿಸಲ್ಪಟ್ಟಿವೆ. ಈ ರಾಜ್ಯಗಳಲ್ಲಿ, ರಾಜ್ಯ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳು, ಪ್ರಸರಣ ಜಾಲಗಳು, ನಗರ ಟರ್ಮಿನಲ್ಗಳು ಮತ್ತು ರಾಜ್ಯ ಗೋದಾಮುಗಳನ್ನು ಸಂಭಾವ್ಯ ಆಸ್ತಿಗಳೆಂದು ಗುರುತಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.