ನವದೆಹಲಿ: ಇಂಡೋನೇಷಿಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಅನೇಕ ಗಣ್ಯರ ಜೊತೆಯಲ್ಲಿ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.
ಬಾಲಿಯಲ್ಲಿ ನಾಯಕರ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಜೋಬೈಡನ್ ಮೆಟ್ಟಿಲುಗಳಲ್ಲಿ ಎಡವಿದ ಫೋಟೋ, ಮ್ಯಾಂಗ್ರೋವ್ ಅರಣ್ಯದಲ್ಲಿನ ಗಿಡ ನೆಡುವ ಫೋಟೋಗಳು ವೈರಲ್ ಆಗಿವೆ.
ಫೋಟೋವೊಂದರಲ್ಲಿ ಪ್ರಧಾನಿ ಮೋದಿ, ಅಧ್ಯಕ್ಷ ಬಿಡೆನ್ ಮತ್ತು ಅವರ ಇಂಡೋನೇಷ್ಯಾದ ಪ್ರಧಾನಿ ಜೊಕೊ ವಿಡೋಡೊ ಗುದ್ದಲಿಗಳನ್ನು ಎತ್ತುತ್ತಿರುವುದನ್ನು ಮತ್ತು ಕ್ಯಾಮರಾಗೆ ನಗುತ್ತಿರುವುದನ್ನು ಕಾಣಬಹುದು. ಮತ್ತೊಂದು ಛಾಯಾಚಿತ್ರದಲ್ಲಿ, ಪ್ರಧಾನಿಯವರು ಅಧ್ಯಕ್ಷ ಬಿಡೆನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು.
ಬಿಡುವಿನ ವೇಳೆಯಲ್ಲಿ ಅನೌಪಚಾರಿಕವಾಗಿ ನಾಯಕರುಗಳು ಕುಳಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಮೋದಿ ಅವರಿಗೆ ಸೆಲ್ಯೂಟ್ ಹೊಡೆದ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಜೋ ಬೈಡನ್ ಅವರ ಸೆಲ್ಯೂಟ್ಗೆ ಪ್ರತಿಯಾಗಿ ಮೋದಿ ಅವರು ಕೈ ಎತ್ತಿ ಹಾಯ್ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಮೋದಿ ಹಸ್ತಲಾಘವ ಮಾಡುತ್ತಿರುವ ದೃಶ್ಯ ಕೂಡ ವೈರಲ್ ಆಗಿದೆ.
With G-20 leaders at the Mangrove Forest in Bali. @g20org pic.twitter.com/D5L5A1B72e
— Narendra Modi (@narendramodi) November 16, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.