ವಾಷಿಂಗ್ಟನ್: ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ವಿಶ್ವ ಮುಂಚೂಣಿಯಲ್ಲಿರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬರ್ಕ್ಲಿ ನ್ಯಾಷನಲ್ ಲ್ಯಾಬೊರೇಟರಿ ಮತ್ತು ಯುಸಿಎಲ್ಎ ನಡೆಸಿದ ಸಂಶೋಧನೆಯು ತಿಳಿಸಿದೆ.
ಡೀಸೆಲ್ ಇಂಧನ ಟ್ರಕ್ಗಳನ್ನು ಎಲೆಕ್ಟ್ರಿಕ್ ಚಾರ್ಜ್ಗೆ ಪರಿವರ್ತನೆ ಮಾಡುವುದರಿಂದ 2070 ರ ವೇಳೆಗೆ ನಿವ್ವಳ ಶೂನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಯ ಗುರಿಯನ್ನು ಪೂರೈಸುವುದು ಭಾರತಕ್ಕೆ ಸಾಧ್ಯವಾಗಲಿದೆ ಎಂದಿದೆ.
ಭಾರತವು ತಾನು ಬಳಸುವ ತೈಲದ 88 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ. ಅಲ್ಲದೇ ದೇಶದ ಸಾರಿಗೆ ವಲಯ ಬಳಸುವ ಒಟ್ಟು ಪೆಟ್ರೋಲಿಯಂನಲ್ಲಿ ಸುಮಾರು 60 ಪ್ರತಿಶತವನ್ನು ಸರಕು ಟ್ರಕ್ಗಳು ಬಳಸುತ್ತವೆ.
ಲಾರೆನ್ಸ್ ಬರ್ಕ್ಲಿ ರಾಷ್ಟ್ರೀಯ ಪ್ರಯೋಗಾಲಯ (ಬರ್ಕ್ಲಿ ಲ್ಯಾಬ್) ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ (ಯುಸಿಎಲ್ಎ) ಸೋಮವಾರ ಹೊರತಂದ ಅಧ್ಯಯನವು ಡೀಸೆಲ್ಗಿಂತ ಎಲೆಕ್ಟ್ರಿಕ್ ಟ್ರಕ್ಗಳು ಕಾರ್ಯನಿರ್ವಹಿಸಲು ಹೆಚ್ಚು ಕೈಗೆಟುಕುವವು ಎಂದಿದೆ. ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ವಿಶ್ವದ ಮುಂಚೂಣಿಯಲ್ಲಿರಬಲ್ಲದು ಎಂದು ಬಹಿರಂಗಪಡಿಸಿದೆ. .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.