ಭವನಗರ: ಗುಜರಾತ್ನ ಭವನಗರ ನಗರದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಸಮಾಜಕ್ಕೆ ಕೊಡುಗೆ ನೀಡುವಂತೆ ದಂಪತಿಗಳಿಗೆ ಕರೆ ನೀಡಿದರು. ಪ್ರತಿಷ್ಠಾನದ ವತಿಯಿಂದ ಜವಾಹರ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಂದೆ ಮರಣ ಹೊಂದಿದ 551 ಹುಡುಗಿಯರು ವಿವಾಹ ಬಂಧನಕ್ಕೊಳಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಮನೆಗೆ ಹೋಗಿ ಸಂಬಂಧಿಕರಿಗಾಗಿ ಪ್ರತ್ಯೇಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಬೇಡಿ ಮತ್ತು ಆ ಹಣವನ್ನು ನಿಮ್ಮ ಮಕ್ಕಳಿಗಾಗಿ ಉಳಿಸಿ ಎಂದು ನವವಿವಾಹಿತರನ್ನು ಒತ್ತಾಯಿಸಿದರು.
“ಗುಜರಾತ್ ಕ್ರಮೇಣ ಸಾಮೂಹಿಕ ವಿವಾಹದ ಈ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಮೊದಲು, ಜನರು ಕೇವಲ ಪ್ರದರ್ಶನಕ್ಕಾಗಿ ಅದ್ಧೂರಿ ಸಮಾರಂಭವನ್ನು ಆಯೋಜಿಸಲು ಹಣವನ್ನು ಸಾಲ ಪಡೆಯುತ್ತಿದ್ದರು. ಆದರೆ ಈಗ, ಜನರು ಜಾಗೃತರಾಗಿದ್ದಾರೆ. ಅವರು ಈಗ ಸಾಮೂಹಿಕ ವಿವಾಹ ಕಾರ್ಯಕ್ರಮಗಳತ್ತ ಮುಖ ಮಾಡಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.
Live: PM Shri @narendramodi attends mass wedding ceremony – 'Papa Ni Pari' Lagnotsav 2022, at Bhavnagar, Gujarat https://t.co/c0PJ3oQqM3
— BJP Gujarat (@BJP4Gujarat) November 6, 2022
Gujarat | Prime Minister Narendra Modi attends mass wedding ceremony – 'Papa Ni Pari' Lagnotsav 2022, in Bhavnagar https://t.co/Bwt1tD7FMw pic.twitter.com/4tjrf6Q9iy
— ANI (@ANI) November 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.