ಬಾಗ್ದಾದ್: ಸಿರಿಯಾದ ನಿರಾಶ್ರಿತ ಬಾಲಕನೊಬ್ಬ ಸಮುದ್ರ ದಂಡೆಯಲ್ಲಿ ಸತ್ತು ಬಿದ್ದಿದ್ದ ಚಿತ್ರ ಇಡೀ ವಿಶ್ವ ಮರುಕುಪಡುವಂತೆ ಮಾಡಿತ್ತು. ಆದರೆ ಮನುಷ್ಯತ್ವವನ್ನೇ ಮರೆತಿರುವ ಇಸಿಸ್ ಉಗ್ರರು ಆ ಕರುಣಾಜನಕ ಫೋಟೋವನ್ನು ಬೆದರಿಕೆಯೊಡ್ಡಲು ಬಳಸಿಕೊಂಡಿದ್ದಾರೆ.
ಇಸ್ಲಾಂ ಭೂಮಿಯನ್ನು ತೊರೆದು ಪಶ್ಚಿಮದತ್ತ ವಲಸೆ ಹೋದರೆ ಏನೆಲ್ಲಾ ಅಪಾಯವಾಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ ಎಂದು ತೋರಿಸಲು ಸತ್ತು ಬಿದ್ದಿದ್ದ ಆ ಮೂರು ವರ್ಷದ ಮಗುವಿನ ಶವದ ಚಿತ್ರವನ್ನು ಬಳಸಿದ್ದಾರೆ.
ಇಸ್ಲಾಂ ಭೂಮಿಯನ್ನು ತೊರೆಯುವುದು ಮಹಾಪಾಪ. ಹೀಗಾಗಿ ನಿರಾಶ್ರಿತರು ಈ ಭೂಮಿಯನ್ನು ತೊರೆದು ಪಶ್ಚಿಮದತ್ತ ಹೋಗಬಾರದು ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.
ಮೂರು ವರ್ಷದ ಅಯ್ಲನ್ ಕುರ್ದಿ ತನ್ನ ತಂದೆ ತಾಯಿಯ ಜತೆ ಸಮುದ್ರ ಮಾರ್ಗವಾಗಿ ವಲಸೆ ಹೋಗುತ್ತಿದ್ದಾಗ ದೋಣಿ ಅಪಘಾತದಲ್ಲಿ ಸತ್ತು ಟರ್ಕಿಯ ಬೊರ್ದಮ್ ಸಮುದ್ರ ತೀರದಲ್ಲಿ ಶವವಾಗಿ ದೊರಕಿದ್ದ. ಈ ಘಟನೆ ಇಡೀ ವಿಶ್ವವೇ ಕಂಬನಿ ಮಿಡಿಯುವಂತೆ ಮಾಡಿತ್ತು.
ಇದೀಗ ಉಗ್ರರು ಇದೇ ಚಿತ್ರವನ್ನು ಇಂಗ್ಲಿಷ್ ನಿಯತಕಾಲಿಕೆ ‘ಡಬಿಕ್’ನಲ್ಲಿ ಪ್ರಕಟಿಸಿ ನಿರಾಶ್ರಿತರಿಗೆ ಬೆದರಿಕೆ ಹಾಕಿದ್ದಾರೆ. ಆ ಮೂಲಕ ತಾವು ಮನುಷ್ಯರೇ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.