News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಅಯೋಧ್ಯೆಯನ್ನು ಬೆಳಗಿಸಲಿವೆ 16 ಲಕ್ಷ ದೀಪಗಳು: ಸಾಕ್ಷಿಯಾಗಲಿದ್ದಾರೆ ಮೋದಿ

ನವದೆಹಲಿ: ಬೆಳಕಿನ ಹಬ್ಬಕ್ಕಾಗಿ ಅಯೋಧ್ಯೆ ಸಜ್ಜಾಗಿದೆ. ದೀಪೋತ್ಸವದ ಅಂಗವಾಗಿ ಅಯೋಧ್ಯೆಯಲ್ಲಿ ಇಂದು 16 ಲಕ್ಷ  ದೀಪಗಳು ಬೆಳಗಲಿವೆ, ದೀಪಾವಳಿ ಆಚರಣೆಗಳು ಪಟಾಕಿ, ಲೇಸರ್ ಶೋ ಮತ್ತು ರಾಮಲೀಲಾಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ.  ಪ್ರಧಾನಿ ನರೇಂದ್ರ ಮೋದಿ ಅವರೂ ಇಂದು ಈ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ.

ಐದು ಅನಿಮೇಟೆಡ್ ಟ್ಯಾಬ್ಲೋಗಳು ಮತ್ತು ವಿವಿಧ ರಾಜ್ಯಗಳ ವಿವಿಧ ನೃತ್ಯ ಪ್ರಕಾರಗಳೊಂದಿಗೆ 11 ರಾಮಲೀಲಾ ಟ್ಯಾಬ್ಲೋಗಳು ಸಹ ದೀಪೋತ್ಸವದಲ್ಲಿ ಇರಲಿವೆ. ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿ ಮತ್ತು ಇತರ 37 ಘಾಟ್‌ಗಳಲ್ಲಿ ಈಗಾಗಲೇ ಸುಮಾರು 15 ಲಕ್ಷ ದೀಪಗಳನ್ನು ಹಾಕಲಾಗಿದೆ.

ಅಯೋಧ್ಯೆ ಆಡಳಿತ ಮಂಡಳಿಯು ಅತಿ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲು ಪ್ರಯತ್ನಿಸಲಿದೆ.

2021 ರಲ್ಲಿ, ಅಯೋಧ್ಯೆ ಆಡಳಿತವು ದೀಪೋತ್ಸವದಲ್ಲಿ 9,41,551 ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ಮಾಡಿತ್ತು. ಆದರೆ, ಉಜ್ಜಯಿನಿ ಮಹಾಶಿವರಾತ್ರಿಯಂದು 11,71,78 ದೀಪಗಳನ್ನು ಬೆಳಗಿಸಿ ಈ ದಾಖಲೆಯನ್ನು ಮುರಿಯಲಾಯಿತು.

ಪ್ರಧಾನಮಂತ್ರಿ ಕಾರ್ಯಾಲಯದ ಪ್ರಕಾರ, ಮೋದಿ ಅವರು ಸಂಜೆ 5 ಗಂಟೆಗೆ ಭಗವಾನ್ ಶ್ರೀ ರಾಮಲಾಲಾ ವಿರಾಜಮಾನನ ದರ್ಶನ ಮತ್ತು ಪೂಜೆಯನ್ನು ಮಾಡುತ್ತಾರೆ, ನಂತರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸ್ಥಳವನ್ನು ಪರಿಶೀಲಿಸುತ್ತಾರೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top