News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೀಪಾವಳಿ ಆಚರಿಸಿದ ಯುಕೆ ಸಂಸತ್ತು

ಲಂಡನ್: ಯುಕೆ ಸಂಸತ್ತಿನ ಸಂಕೀರ್ಣದಲ್ಲಿ ಸೋಮವಾರ ಸಂಜೆ ದೀಪಾವಳಿ ಆಚರಣೆ ಮಾಡಲಾಗಿದೆ.  ಹರೇ ಕೃಷ್ಣ ದೇವಸ್ಥಾನದ ಅರ್ಚಕರ ಮಂತ್ರ ಮಠಣಗಳ ಮೂಲಕ ಶಾಂತಿಗಾಗಿ ಪ್ರಾರ್ಥನೆಯನ್ನು ಮಾಡುವ ಮತ್ತು ಮೇಣದಬತ್ತಿಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಆಚರಿಸಲಾಗಿದೆ.

ವೆಸ್ಟ್‌ಮಿನಿಸ್ಟರ್ ಅರಮನೆಯೊಳಗಿನ ಸ್ಪೀಕರ್ ಹೌಸ್‌ನ ಸ್ಟೇಟ್ ರೂಮ್‌ನಲ್ಲಿ ಆಚರಣೆಯನ್ನು ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ಇದು ಸಂಸತ್ತಿನ ಸಂಕೀರ್ಣದಲ್ಲಿ ನಡೆದ ಇದುವರೆಗಿನ ಅತಿದೊಡ್ಡ ದೀಪಾವಳಿ ಕಾರ್ಯಕ್ರಮವನ್ನು ಎಂದು ಹೇಳಲಾಗಿದೆ.

ಈ ಆಚರಣೆಯಲ್ಲಿ ಪಕ್ಷೇತರ ಸಂಸದರು, ರಾಜತಾಂತ್ರಿಕರು, ಭಾರತೀಯ ಸಮುದಾಯದ ಮುಖಂಡರು ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಪ್ರತಿನಿಧಿಗಳು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಹೌಸ್‌ ಆಫ್ ಕಾಮನ್ಸ್ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಅವರು, “ಇಲ್ಲಿ ಮತ್ತು ಪ್ರಪಂಚದಾದ್ಯಂತ ದೀಪಾವಳಿ ಆಚರಿಸುತ್ತಿರುವ ಎಲ್ಲಾ ಸಮುದಾಯಗಳಿಗೆ ಶಾಂತಿ ಮತ್ತು ಸಂತೋಷವನ್ನು ನಾನು ಬಯಸುತ್ತೇನೆ” ಎಂದರು. ಜಾಹೀರಾತುಗಳು

“ಬ್ರಿಟಿಷ್ ಭಾರತೀಯರು  ಯುಕೆ ಜನಸಂಖ್ಯೆಯ ಶೇಕಡಾ 2 ರಷ್ಟಿದ್ದಾರೆ ಮತ್ತು ಅಲ್ಲಿನ ಜಿಡಿಪಿಗೆ ಶೇಕಡಾ 8 ರಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ಸಂಸದರೊಬ್ಬರು” ಈ ವೇಳೆ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top