ಗುವಾಹಟಿ: ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಅಸ್ಸಾಂನಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಬಂಧಿತರಲ್ಲಿ ಇಬ್ಬರು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ತಂಡದ ಜೊತೆ ಸಂಪರ್ಕ ಹೊಂದಿದ್ದರು ಎಂದು ಅವರು ಹೇಳಿದ್ದಾರೆ.
“ನಾವು ಅಸ್ಸಾಂನಿಂದ ಜಿಹಾದಿ ಅಂಶಗಳನ್ನು ಬೇರುಸಹಿತ ಕಿತ್ತೊಗೆಯಲು ನಿರ್ಧರಿಸಿದ್ದೇವೆ. ತಮುಲ್ಪುರ್ ಪೋಲೀಸರು 2 ವ್ಯಕ್ತಿಗಳನ್ನು ಬಂಧಿಸುವಲ್ಲಿ ಶ್ಲಾಘನೀಯ ಕೆಲಸ ಮಾಡಿದೆ. ಬಂಧಿತ ಸಾದಿಕ್ ಅಲಿ ಮತ್ತು ಜಾಕಿಬುಲ್ ಅಲಿ ಬಾಂಗ್ಲಾ ಮೂಲದ ಭಯೋತ್ಪಾದಕ ಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ತಂಡಕ್ಕೆ ಸೇರಲು ಯುವಕರನ್ನು ಆಕರ್ಷಿಸುತ್ತಿದ್ದ” ಎಂದು ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಯುವಕರನ್ನು ಉಗ್ರವಾದಿಗಳನ್ನಾಗಿ ಮಾಡುತ್ತಿರುವ ಸಾದಿಕ್ ಅಲಿ ಬಂಧನವು “ಮಹತ್ವದ ಸಾಧನೆ” ಎಂದು ಶರ್ಮಾ ಬಣ್ಣಿಸಿದ್ದಾರೆ.
ಸಾದಿಕ್ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (ಜೆಎಂಬಿ) ಗೂ ಸಂಪರ್ಕ ಹೊಂದಿದ್ದಾನೆ ಎಂದು ಅವರು ಹೇಳಿದ್ದಾರೆ.
ಇದೇ ಪ್ರಕರಣದಲ್ಲಿ ನಲ್ಬರಿ ಜಿಲ್ಲೆಯ ಘಾಗ್ರಾಪರ್ ಪೊಲೀಸರು ಇನ್ನೂ ಇಬ್ಬರು ವ್ಯಕ್ತಿಗಳಾದ ಹೇಬಲ್ ಅಲಿ ಮತ್ತು ಅಬು ರೈಹಾನ್ ಅವರನ್ನು ಬಂಧಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಈ ವರ್ಷ ರಾಜ್ಯದಲ್ಲಿ 40 ಜಿಹಾದಿಗಳನ್ನು ಬಂಧಿಸಲಾಗಿದೆ ಎಂದು ಶರ್ಮಾ ಸೆಪ್ಟೆಂಬರ್‌ನಲ್ಲಿ ವಿಧಾನಸಭೆಯಲ್ಲಿ ಹೇಳಿದ್ದರು. ಈ ವರ್ಷದ ಜನವರಿಯಿಂದ, ಬಾಂಗ್ಲಾದೇಶದ ನಿಷೇಧಿತ ಅನ್ಸಾರುಲ್ ಇಸ್ಲಾಮ್‌ಗೆ ಸಂಪರ್ಕ ಹೊಂದಿರುವ ಐದು ಮಾಡ್ಯೂಲ್‌ಗಳನ್ನು ಭೇದಿಸಲಾಗಿದೆ.
ಈ ವರ್ಷ ಅಸ್ಸಾಂನಲ್ಲಿ ನಾಲ್ಕು ಮದರಸಾಗಳನ್ನು ಸಹ ಕೆಡವಲಾಗಿದೆ. ಮೂರು ಮದರಸಾಗಳನ್ನು ಆಯಾ ಜಿಲ್ಲಾಡಳಿತವು “ಕಟ್ಟಡದ ನಿಯಮಗಳಿಗೆ ಬದ್ಧವಾಗಿಲ್ಲದ ಕಾರಣ” ಕೆಡವಿತ್ತು ಮತ್ತು ನಾಲ್ಕನೆಯದನ್ನು ಸ್ಥಳೀಯ ಜನರು ನೆಲಸಮಗೊಳಿಸಿದ್ದಾರೆ.
We’re determined to root out jihadi elements from Assam.@TamulpurPolice has done a commendable job in nabbing 2 persons — Sadeq Ali & Jakibul Ali — who lured youth to join B’desh-based terror outfit Ansarullah Bangla Team affiliated to al-Qaeda in Indian Subcontinent (AQIS).
— Himanta Biswa Sarma (@himantabiswa) October 17, 2022
We’re determined to root out jihadi elements from Assam.@TamulpurPolice has done a commendable job in nabbing 2 persons — Sadeq Ali & Jakibul Ali — who lured youth to join B’desh-based terror outfit Ansarullah Bangla Team affiliated to al-Qaeda in Indian Subcontinent (AQIS).
— Himanta Biswa Sarma (@himantabiswa) October 17, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.