ನವದೆಹಲಿ: 1999 ರ ಕಾರ್ಗಿಲ್ ಯುದ್ಧದಲ್ಲಿ ಅತ್ಯುನ್ನತ ತ್ಯಾಗವನ್ನು ಮಾಡಿ ಹುತಾತ್ಮರಾಗಿರುವ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಪುಣ್ಯತಿಥಿಯಾದ ಇಂದು ರಾಷ್ಟ್ರವು ಅವರಿಗೆ ಗೌರವ ಸಲ್ಲಿಸುತ್ತಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮಾಡಿದ ಅತ್ಯುನ್ನತ ತ್ಯಾಗವನ್ನು ಸ್ಮರಿಸಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಅವರ ಅಪ್ರತಿಮ ಶೌರ್ಯ ಮತ್ತು ತ್ಯಾಗವು ರಾಷ್ಟ್ರದ ಸೇವೆಯಲ್ಲಿ ಧೈರ್ಯದ ಅದ್ಭುತ ಉದಾಹರಣೆಯಾಗಿ ಉಳಿದಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಸಿಂಗ್ ಹೇಳಿದ್ದಾರೆ.
1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ತಮ್ಮ ತುಕಡಿಯನ್ನು ಮುನ್ನಡೆಸಿ ಕಾರ್ಯತಂತ್ರದ ಪ್ರಮುಖವಾದ Pt – 5140 ಅನ್ನು ವಶಪಡಿಸುವಲ್ಲಿ ಯಶಸ್ವಿಯಾದರು, ಈ ಕಾರ್ಯಾಚರಣೆಯಲ್ಲಿ ಅವರು ನಾಲ್ಕು ಶತ್ರುಗಳನ್ನು ಧೈರ್ಯದಿಂದ ಸಂಹಾರ ಮಾಡಿದ್ದರು. Pt 4875 ಅನ್ನು ಸೆರೆಹಿಡಿಯುವ ಮತ್ತೊಂದು ಯುದ್ಧದಲ್ಲಿ, ಕ್ಯಾಪ್ಟನ್ ಬಾತ್ರಾ ಶತ್ರುಗಳ ವಿರುದ್ಧ ಸೆಟೆದು ನಿಂತು ಶೌರ್ಯವನ್ನು ಪ್ರದರ್ಶಿಸಿದರು ಮತ್ತು ಅಸಾಧ್ಯವಾದ ಸಾಧನೆ ಮಾಡಿದರು. ಈ ಕಾರ್ಯಾಚರಣೆಯಲ್ಲಿ, ಗಂಭೀರವಾದ ಗಾಯಗಳನ್ನು ಅನುಭವಿಸಿದರೂ ದಾಳಿಯನ್ನು ಮುಂದುವರೆಸಿದರು ಮತ್ತು ಪ್ರಾಣ ತ್ಯಾಗ ಮಾಡಿದರು. ಕ್ಯಾಪ್ಟನ್ ಬಾತ್ರಾ ಅವರಿಗೆ ಮರಣೋತ್ತರವಾಗಿ ಪರಮ ವೀರ ಚಕ್ರವನ್ನು ನೀಡಲಾಯಿತು.
Remembering the supreme sacrifice made by Captain Vikram Batra on his Balidan Diwas. His unmatched bravery and sacrifice during the Kargil War remain a glorious example of courage in service of the nation. My tributes to him on his ‘Balidan Diwas’. pic.twitter.com/FlqaeTjX3M
— Rajnath Singh (@rajnathsingh) July 7, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.