ನವದೆಹಲಿ: ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ತನ್ನ 5 ನೇ ವಿಶೇಷ ರಾಮಾಯಣ ರೈಲು ಪ್ರವಾಸವನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. 17 ದಿನಗಳಲ್ಲಿ ಈ ರೈಲು ಪ್ರವಾಸಿಗರನ್ನು ಭಗವಾನ್ ಶ್ರೀರಾಮನಿಗೆ ಸಂಬಂಧಿಸಿದ 30 ಸ್ಥಳಗಳಿಗೆ ಕೊಂಡೊಯ್ಯಲಿದೆ.
“ಶ್ರೀ ರಾಮಾಯಣ ಯಾತ್ರೆ” ಎಂಬ ಈ ಪ್ರವಾಸವು ಜುಲೈ 25, 2025 ರಿಂದ ಪ್ರಾರಂಭವಾಗಲಿದ್ದು, ಶ್ರೀರಾಮನಿಗೆ ಸಂಬಂಧಿಸಿದ 30 ಕ್ಕೂ ಹೆಚ್ಚು ಸ್ಥಳಗಳನ್ನು ಒಳಗೊಳ್ಳಲಿದೆ. ಅಯೋಧ್ಯೆಯಿಂದ ಪ್ರಾರಂಭವಾಗಿ ನಂದಿಗ್ರಾಮ್, ಸೀತಾಮರ್ಹಿ, ಜನಕಪುರ, ಬಕ್ಸಾರ್, ವಾರಣಾಸಿ, ಪ್ರಯಾಗರಾಜ್, ಚಿತ್ರಕೂಟ, ನಾಸಿಕ್, ಹಂಪಿ ಮತ್ತು ಅಂತಿಮವಾಗಿ ದಕ್ಷಿಣ ಭಾರತದ ರಾಮೇಶ್ವರಂ ದ್ವೀಪಕ್ಕೆ ಹೋಗಿ ದೆಹಲಿಗೆ ಮರಳಲಿದೆ.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ದೇವಸ್ಥಾನ ಉದ್ಘಾಟನೆಯಾದಾಗಿನಿಂದ, ವಿವಿಧ ಸ್ಥಗಳ ಭಕ್ತರು ಈ ಸ್ಥಳಗಳಿಗೆ ಆಸಕ್ತಿಯಿಂದ ಭೇಟಿ ನೀಡುತ್ತಿರುವುದರಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ದೊರೆತಿದೆ ಎಂದು ಐಆರ್ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
“ಉದ್ಘಾಟನೆಯ ನಂತರ, ಇದು ನಾವು ನಡೆಸುತ್ತಿರುವ 5 ನೇ ರಾಮಾಯಣ ಪ್ರವಾಸವಾಗಿದೆ ಮತ್ತು ನಮ್ಮ ಹಿಂದಿನ ಎಲ್ಲಾ ಪ್ರವಾಸಗಳು ಪ್ರಯಾಣಿಕರು ಮತ್ತು ಯಾತ್ರಿಕರಿಂದ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯನ್ನು ಪಡೆದಿವೆ” ಎಂದು ಐಆರ್ಸಿಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 3 ಎಸಿಗೆ 1,17,975 ರೂ., 2 ಎಸಿಗೆ 1,40,120 ರೂ., 1 ಎಸಿ ಕ್ಲಾಸ್ ಕ್ಯಾಬಿನ್ಗೆ 1,66,380 ರೂ. ಮತ್ತು 1 ಎಸಿ ಕೂಪೆಗೆ 1,79,515 ರೂ. ವೆಚ್ಚವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.